ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್ : ಗದಗದಲ್ಲಿ ಆಟೋ ಚಾಲಕರು ಹೈರಾಣ
ಗದಗ, 08 ಏಪ್ರಿಲ್ (ಹಿ.ಸ.) ಆ್ಯಂಕರ್:- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂಧನ ದರ ಏರಿಕೆ ಕಂಡುಬಂದಿದ್ದು, ಅದರ ನೇರ ಪರಿಣಾಮ ಗದಗ-ಬೆಟಗೇರಿ ಅವಳಿ ನಗರದ ಆಟೋ ಚಾಲಕರ ಮೇಲೆ ಬಿದ್ದಿದೆ. ಎಲ್ ಪಿ ಜಿ ಗ್ಯಾಸ್ ಬೆಲೆ ಏರಿಕೆಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರಯಾಣಿಕರ
ಫೋಟೋ


ಗದಗ, 08 ಏಪ್ರಿಲ್ (ಹಿ.ಸ.)

ಆ್ಯಂಕರ್:- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂಧನ ದರ ಏರಿಕೆ ಕಂಡುಬಂದಿದ್ದು, ಅದರ ನೇರ ಪರಿಣಾಮ ಗದಗ-ಬೆಟಗೇರಿ ಅವಳಿ ನಗರದ ಆಟೋ ಚಾಲಕರ ಮೇಲೆ ಬಿದ್ದಿದೆ. ಎಲ್ ಪಿ ಜಿ ಗ್ಯಾಸ್ ಬೆಲೆ ಏರಿಕೆಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರಯಾಣಿಕರು ಸಿಗದೆ ಅನೇಕ ಆಟೋಗಳು ಮನೆ ಮುಂದೆ ನಿಲ್ಲುವಂತಾಗಿದೆ.

ಗದಗ ನಗರದ ಎಸ್.ಎಂ. ಕೃಷ್ಣಾ ನಗರದ ನಿವಾಸಿಯಾಗಿರುವ ಆಟೋ ಚಾಲಕ ಸುರೇಶ್ ಸೊಳಂಕಿ ತಮ್ಮ ದುಸ್ಥಿತಿಯನ್ನು ವಿವರಿಸುತ್ತಾ, ಎಲ್ ಪಿ ಜಿ “ಬೆಲೆ ಹೆಚ್ಚಾದ ಕಾರಣ ದಿನಸಿ ಆದಾಯವೇ ಕುಂಠಿತವಾಗಿದೆ. ಬಾಡಿಗೆ ಆಟೋ ಚಾಲನೆ ಮಾಡ್ತಾಯಿದ್ದೇನೆ. ಆದರೆ ಮಾಲೀಕರಿಗೆ ಹಣ ಕಟ್ಟಲು ಆಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ಇದಲ್ಲದೆ, ತಮ್ಮ ಆಟೋ ಕೆಟ್ಟು ನಿಂತಿದ್ದರೂ ರಿಪೇರಿ ಮಾಡಿಸಲು ಸಹ ಹಣದ ಕೊರತೆ ಎದುರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕುಟುಂಬದ ನಿರ್ವಹಣೆಯೇ ಕಷ್ಟವಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುವುದು ದುಸ್ತರವಾಗಿದೆ. ಇಎಮ್ಐ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾಲದ ಬಾಧೆ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಗದಗ-ಬೆಟಗೇರಿ ಪ್ರದೇಶದ ಅನೇಕ ಆಟೋ ಚಾಲಕರ ಸ್ಥಿತಿಯೂ ಇದೇ ರೀತಿಯದ್ದಾಗಿದ್ದು, ಎಲ್ ಪಿ ಜಿ ದರ ಏರಿಕೆ ಮತ್ತು ಪ್ರಯಾಣಿಕರ ಕೊರತೆಯಿಂದ ಬದುಕು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಆಟೋ ಚಾಲಕರ ಸಂಕಷ್ಟವನ್ನು ಗಮನಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande