
ಗದಗ, 08 ಏಪ್ರಿಲ್ (ಹಿ.ಸ.) :
ಆ್ಯಂಕರ್:- ಬಿಜೆಪಿ ಆರ್ ಎಸ್ ಎಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡಲೇ ಬಂಧಿಸಬೆಂದು ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ ಆಗ್ರಹಿಸಿದ್ದಾರೆ.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಭಾಷಣದ ವೇಳೆ ನಮಾಜ್ ಮಾಡುವಾಗ ವಿಷ ಸರ್ಪ ಬಂದರೆ ನಮಾಜ್ ಬಲ್ಲಿಸಿ ಅದನ್ನು ಕೊಲ್ಲಿ ಬಜೆಪಿ ಆರ್ ಎಸ್ ಎಸ್ ಬಂದರೂ ನಮಾಜ್ ನಿಲ್ಲಿಸಿ ಅವರನ್ನು ಕೊಲ್ಲಿ ಇದು ಕರಾನ್ ನಲ್ಲಿ ಉಲ್ಲೇಖವಾಗಿದೆ ಎಂದಿದ್ದಾರೆ. ಇದು ಬೆಂಕಿ ಹಚ್ಚುವ ಕೆಲಸ ಎಂದು ಟೀಕಿಸಿದರು.
ಕೋಮು ಗಲಭೆ ಹರಡುವ ಸಂದರ್ಭಗಳು ಬರಬಹುದು. ದೇಶದ್ರೋಹಿಗಳು, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳನ್ನು ಆಡಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಕೂಡಲೇ ಬಂಧಿಸಬೇಕೆಂದು ರಾಜು ಕುರುಡಗಿ ರವರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP