ಲೋಕಾಯುಕ್ತರಿಂದ ಮೀನುಗಾರಿಕೆ ಸಹಾಯಕ ನಿರ್ದೇಶಕ ಶಿವಣ್ಣ ಮನೆ, ಕಚೇರಿ ತನಿಖೆ
ಬಳ್ಳಾರಿ, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮೀನುಗಾರಿಕೆ ಇಲಾಖೆಯ ಬಳ್ಳಾರಿ ಜಿಲ್ಲಾ ಸಹಾಯಕ ನಿರ್ದೇಶಕರಾದ ಶಿವಣ್ಣ ಅವರ ಮನೆ - ಕಾರು ಮತ್ತು ಕಚೇರಿಯ ಮೇಲೆ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ತಂಡವು ಸಹಾಯಕ ನಿರ್ದೇಶಕರಾದ ಶಿವಣ್ಣ ಅವರು ಬಳಸುತ್ತಿದ್ದ ಸರ್ಕಾರ
ಲೋಕಾಯುಕ್ತರಿಂದ ಮೀನುಗಾರಿಕೆ ಸಹಾಯಕ ನಿರ್ದೇಶಕ ಶಿವಣ್ಣ ಮನೆ, ಕಚೇರಿ ತನಿಖೆ


ಲೋಕಾಯುಕ್ತರಿಂದ ಮೀನುಗಾರಿಕೆ ಸಹಾಯಕ ನಿರ್ದೇಶಕ ಶಿವಣ್ಣ ಮನೆ, ಕಚೇರಿ ತನಿಖೆ


ಬಳ್ಳಾರಿ, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮೀನುಗಾರಿಕೆ ಇಲಾಖೆಯ ಬಳ್ಳಾರಿ ಜಿಲ್ಲಾ ಸಹಾಯಕ ನಿರ್ದೇಶಕರಾದ ಶಿವಣ್ಣ ಅವರ ಮನೆ - ಕಾರು ಮತ್ತು ಕಚೇರಿಯ ಮೇಲೆ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳ ತಂಡವು ಸಹಾಯಕ ನಿರ್ದೇಶಕರಾದ ಶಿವಣ್ಣ ಅವರು ಬಳಸುತ್ತಿದ್ದ ಸರ್ಕಾರಿ ಕಾರು, ಸಿದ್ಧಾರ್ಥ ನಗರದಲ್ಲಿ ಇರುವ ಮನೆ, ಕಚೇರಿ ಹಾಗೂ ಇನ್ನಿತರೆ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಲೋಕಾಯುಕರ್ತು ಮನೆಯ ವಿವಿಧ ಕೋಣೆಗಳು, ಮಂಚ ಮತ್ತು ಇನ್ನಿತರೆ ಸ್ಥಳಗಳಲ್ಲಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಸಹಾಯಕ ಆಯುಕ್ತ ಶಿವಣ್ಣ ಅವರ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ 10ಕ್ಕೂ ಹೆಚ್ಚಿನ ದೂರುಗಳು ದಾಖಲಾಗಿದ್ದು, ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಇನ್ನಿತರೆಗಳ ಕುರಿತು ದೂರುಗಳು ಮಾಹಿತಿ ನೀಡಿದ್ದವು ಎನ್ನಲಾಗಿದೆ. ದಾಳಿ ಮುಂದುವರೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande