ಕೊಪ್ಪಳ ನಗರಸಭೆ 2026-2027ನೇ ಸಾಲಿನ ಆಯವ್ಯಯ
ಕೊಪ್ಪಳ, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರಸಭೆಯ ಸನ್ 2026-2027ನೇ ಸಾಲಿನ ಆಯ-ವ್ಯಯ (ಬಡ್ಜೆಟ್)ವನ್ನು ಸಿದ್ದಪಡಿಸಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ. ಕೊಪ್ಪಳ ನಗರಸಭೆಯ ಸನ್ 2026-2027ನೇ ಸಾಲಿನ ಆಯ-ವ್ಯಯ (ಬಡ್ಜೆಟ್)ಗೆ ನಗರಸಭೆಯ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲ
ಕೊಪ್ಪಳ ನಗರಸಭೆ 2026-2027ನೇ ಸಾಲಿನ ಆಯವ್ಯಯ


ಕೊಪ್ಪಳ, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರಸಭೆಯ ಸನ್ 2026-2027ನೇ ಸಾಲಿನ ಆಯ-ವ್ಯಯ (ಬಡ್ಜೆಟ್)ವನ್ನು ಸಿದ್ದಪಡಿಸಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ.

ಕೊಪ್ಪಳ ನಗರಸಭೆಯ ಸನ್ 2026-2027ನೇ ಸಾಲಿನ ಆಯ-ವ್ಯಯ (ಬಡ್ಜೆಟ್)ಗೆ ನಗರಸಭೆಯ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರ ಅನುಮೋದನೆ ಪಡೆದುಕೊಳ್ಳಲಾಗಿದ್ದು, ಪ್ರಸಕ್ತ ಸಾಲಿನ ಕೊಪ್ಪಳ ನಗರಸಭೆಯ ಬಡ್ಜೆಟ್ ವಿವರಣೆ ಇಂತಿದೆ. 35,60,53,905 ರೂ.ಗಳ ರಾಜಸ್ವ ಸ್ವೀಕೃತಿ, 2,59,55,000 ರೂ.ಗಳ ಬಂಡವಾಳ ಸ್ವೀಕೃತಿ, 17,23,52,373 ರೂ.ಗಳ ಅಸಾಧಾರಣ ಸ್ವೀಕೃತಿಗಳು ಸೇರಿ ಒಟ್ಟು 55,43,61,278 ರೂ.ಗಳ ಸ್ವೀಕೃತಿಗಳು ಒಳಗೊಂಡಿವೆ.

ಪಾವತಿಗಳಲ್ಲಿ 23,83,75,953 ರೂ.ಗಳ ರಾಜಸ್ವ ಪಾವತಿಗಳು, 16,13,55,000 ರೂ.ಗಳ ಬಂಡವಾಳ ಪಾವತಿಗಳು, 15,30,35,325 ರೂ.ಗಳ ಅಸಾಧಾರಣ ಪಾವತಿಗಳು ಸೇರಿ ಒಟ್ಟು 55,27,66,278 ರೂ.ಗಳ ಪಾವತಿಗಳನ್ನು ಒಳಗೊಂಡಿದೆ ಮತ್ತು 15,95,000 ರೂ.ಗಳ ಹೆಚ್ಚುವರಿ ಉಳಿತಾಯವಾಗಿದೆ ಎಂದು ಕೊಪ್ಪಳ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande