ಆರ್.ಎಸ್.ಎಸ್ ಬಗ್ಗೆ ಖರ್ಗೆ ವಿವಾದಾತ್ಮಕ ಹೇಳಿಕೆ : ದೂರು ದಾಖಲಿಸಲು ಯತ್ನಾಳ್ ಆಗ್ರಹ
ಆರ್ಎಸ್ಎಸ್
ಯತ್ನಾಳ್


ವಿಜಯಪುರ, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಚುನಾವಣಾ ಪ್ರಚಾರದ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು “ವಿಷಪೂರಿತ ಹಾವಿನಂತೆ” ಎಂದು ಹೋಲಿಕೆ ಮಾಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಶ್ವದ ಅತಿ ದೊಡ್ಡ ಸ್ವಯಂ ಸೇವಕ ಸಂಘಟನೆಯಾದ ಸಂಘದ ಮೇಲೆ ಈ ರೀತಿಯ ನಿಂದನಾತ್ಮಕ ಹೇಳಿಕೆ ನೀಡಿರುವುದು ಅನಗತ್ಯ, ಅನುಚಿತ ಹಾಗೂ ಅನವಶ್ಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ವಿಕೋಪ, ಅಪಘಾತ, ನೆರೆ ಸೇರಿದಂತೆ ರಾಷ್ಟ್ರಕ್ಕೆ ಯಾವುದೇ ಸಂಕಷ್ಟ ಉಂಟಾದಾಗ ಮೊದಲಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸಂಘದ ಸ್ವಯಂ ಸೇವಕರು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

ಸಂಘವು ಅತ್ಯಂತ ಶಿಸ್ತು ಬದ್ ಸಂಘಟನೆಯಾಗಿದ್ದು ರಾಷ್ಟ್ರ ನಿರ್ಮಾಣವೇ ಅದರ ಮೂಲ ಧ್ಯೇಯವಾಗಿದೆ. ಇಂತಹ ಸಂಘಟನೆಯನ್ನು ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಖರ್ಗೆ ಅವರ ವಿರುದ್ಧ ಕೂಡಲೇ ದೂರು ದಾಖಲಿಸಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande