
ನವದೆಹಲಿ, 06 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಂಸತ್ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸಭೆಗೆ ಹೊಸದಾಗಿ ಆಯ್ಕೆಯಾದ 19 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದಂತೆ ಹಲವಾರು ಗಣ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಮಹಾರಾಷ್ಟ್ರದಿಂದ ಆಯ್ಕೆಯಾದ ಸದಸ್ಯರಲ್ಲಿ ರಾಮದಾಸ್ ಬಂಡು ಅಠಾವಳೆ, ಮಾಯಾ ಚಿಂತಾಮನ್ ಇವ್ನಾಟೆ, ಶರದ್ಚಂದ್ರ ಪವಾರ್, ರಾಮರಾವ್ ಸಖಾರಾಮ್ ವಡ್ಕುಟೆ ಹಾಗೂ ಡಾ. ಜ್ಯೋತಿ ನಾಗನಾಥ್ ವಾಘಮಾರೆ ಸೇರಿದ್ದಾರೆ.
ಇನ್ನೂ ತಮಿಳುನಾಡಿನಿಂದ ಡಾ. ಅನ್ಬುಮಣಿ ರಾಮದಾಸ್, ಎಂ. ತಂಬಿದುರೈ, ತಿರುಚ್ಚಿ ಶಿವ ಸೇರಿದಂತೆ ಹಲವು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಪಶ್ಚಿಮ ಬಂಗಾಳದಿಂದ ಬಾಬುಲ್ ಸುಪ್ರಿಯೋ ಬರಾಲ್, ಮೇನಕಾ ಗುರುಸ್ವಾಮಿ, ರಾಜೀವ್ ಕುಮಾರ್, ರುಕ್ಮಿಣಿ ಮಲ್ಲಿಕ್ ಹಾಗೂ ಬಿಸ್ವಜಿತ್ ಸಿನ್ಹಾ ಪ್ರಮಾಣ ವಚನ ಸ್ವೀಕರಿಸಿದರು.
ಒಡಿಶಾದಿಂದ ಸಂತರುತ್ ಮಿಶ್ರಾ, ದಿಲೀಪ್ ಕುಮಾರ್ ರೇ ಹಾಗೂ ಮನಮೋಹನ್ ಸಮಲ್ ರಾಜ್ಯಸಭಾ ಸದಸ್ಯರಾಗಿ ಪದಗ್ರಹಣ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa