ಮಂಗಳೂರು ಐಟಿಐ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ
ಕೊಪ್ಪಳ, 30 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್–2026ನೇ ಸಾಲಿನ ಐಟಿಐ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಮೆರಿಟ್ ಕಂ ರಿಜರ್ವೇಷನ್ ಆಧಾರದ ಮೇಲ
ಮಂಗಳೂರು ಐಟಿಐ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ


ಕೊಪ್ಪಳ, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್–2026ನೇ ಸಾಲಿನ ಐಟಿಐ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಮೆರಿಟ್ ಕಂ ರಿಜರ್ವೇಷನ್ ಆಧಾರದ ಮೇಲೆ ಮೊದಲನೇ ಸುತ್ತಿನ ಪ್ರವೇಶಕ್ಕಾಗಿ ಮೇ 8ರವರೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ಕೋರ್ಸ್ಗಳು ಲಭ್ಯವಿದ್ದು, ಪ್ರತಿ ಕೋರ್ಸ್ಗೆ 16 ಸ್ಥಾನಗಳು ಲಭ್ಯವಿರುತ್ತವೆ. ಆಸಕ್ತ ಅಭ್ಯರ್ಥಿಗಳು www.cite.karnataka.gov.in ವೆಬ್ಸೈಟ್ ಮೂಲಕ ಅಥವಾ ಸಮೀಪದ ಇಂಟರ್ನೆಟ್ ಸೆಂಟರ್ಗಳಲ್ಲಿ ಹಾಗೂ ನೇರವಾಗಿ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರಿ ಐಟಿಐಗಳಲ್ಲಿ ವಾರ್ಷಿಕ ಬೋಧನಾ ಶುಲ್ಕ ರೂ.1200/- ವಿನಾಯಿತಿ ನೀಡಲಾಗಿದ್ದು, ಅವರಿಗೆ ಪ್ರವೇಶ ಉಚಿತವಾಗಿದೆ. ಪ್ರವೇಶಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಸ್ಥೆಯನ್ನು ಸಂಪರ್ಕಿಸಲು ಸಂಸ್ಥೆಯ ತರಬೇತಿ ಅಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande