
ಹುಬ್ಬಳ್ಳಿ, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ, ಪೂರ್ವ ಮಧ್ಯ ರೈಲ್ವೆಯು ದಾನಾಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ನಡುವಿನ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿದೆ.
ರೈಲು ಸಂಖ್ಯೆ 03251 ದಾನಾಪುರ–ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು ಈ ಮೊದಲು 30.04.2026 ರವರೆಗೆ ಸಂಚರಿಸಲು ನಿಗದಿಯಾಗಿದ್ದ ಈ ರೈಲಿನ ಸೇವೆಯನ್ನು ಈಗ 31.05.2026ರವರೆಗೆ ಮುಂದುವರಿಸಲಾಗಿದೆ.
ರೈಲು ಸಂಖ್ಯೆ 03252 ಎಸ್ಎಂವಿಟಿ ಬೆಂಗಳೂರು–ದಾನಾಪುರ ವಿಶೇಷ ರೈಲು ಈ ಮೊದಲು 02.05.2026 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿದ್ದ ಈ ರೈಲು ಸೇವೆಯನ್ನು 02.06.2026ರವರೆಗೆ ಸಂಚರಿಸಲಿದೆ.
ವಿಸ್ತರಿಸಲಾದ ಈ ಅವಧಿಯಲ್ಲಿ ಎರಡೂ ರೈಲುಗಳು (03251/03252) ಪ್ರತಿ ದಿಕ್ಕಿನಲ್ಲಿ ತಲಾ 31 ಟ್ರಿಪ್’ಗಳನ್ನು ಪೂರೈಸಲಿವೆ. ಈ ರೈಲುಗಳ ಸಮಯ ಮತ್ತು ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೇಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa