ಸೇವಾ ಕೇಂದ್ರದಲ್ಲಿ ನಾನಾ ಸೇವಾ ಸೌಲಭ್ಯ ಸದುಪಯೋಗ ಪಡೆಯಲು ಕರೆ
ಪಾಸ್ಪೋರ್ಟ್
ಫೋಟೋ


ಗದಗ, 30 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ಸಿಟಿ ಅಂಚೆ ಕಚೇರಿಯಲ್ಲಿರುವ ಪಾಸ್‌ ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್ಪೋರ್ಟ್ ನಾನಾ ಸೇವೆಗಳನ್ನು ಸದುಪಯೋಗ ಪಡೆಯಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್.ಶಿರಹಟ್ಟಿ ಪ್ರಕಟನೆ ಮೂಲಕ ತಿಳಿಸಿದ್ದಾರೆ.

ಗದಗ ಸಿಟಿ ಅಂಚೆ ಕಚೇರಿಯಲ್ಲಿ, ಪಾಸ್‌ ಪೋರ್ಟ್ ಸೇವಾ ಕೇಂದ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಗರಿಕರಿಗೆ ನಾನಾ ಪಾಸ್‌ ಪೋರ್ಟ್ ಸಂಬಂಧಿತ ಸೇವೆಗಳು ಒಂದೇ ಸ್ಥಳದಲ್ಲಿ ಸುಲಭವಾಗಿ ದೊರೆಯುತ್ತವೆ.

ಈ ಕೇಂದ್ರದಲ್ಲಿ ಹೊಸ ಪಾಸ್‌ ಪೋರ್ಟ್ ಅರ್ಜಿ ಸಲ್ಲಿಕೆ ಪಾಸ್ಪೋರ್ಟ್ ನವೀಕರಣ , ಮರುಜಾರಿ, ಹೆಸರು, ವಿಳಾಸ, ಜನ್ಮ ದಿನಾಂಕ ಮುಂತಾದ ತಿದ್ದುಪಡಿ, ಕಳೆದುಹೋದ, ಹಾನಿಗೊಂಡ ಪಾಸ್‌ ಪೋರ್ಟ್ ಮರುಜಾರಿ, ಅಪ್ರಾಪ್ತವಯಸ್ಕರ ಪಾಸ್‌ಪೋರ್ಟ್ ಅರ್ಜಿ, ಪೊಲೀಸ್ ಪರಿಶೀಲನೆ ಸಂಬಂಧಿತ ಪ್ರಕ್ರಿಯೆ, ಅರ್ಜಿ ಸ್ಥಿತಿ ಪರಿಶೀಲನೆ, ಅಗತ್ಯ ಮಾರ್ಗದರ್ಶನ ಹಾಗೂ ಸಹಾಯ ಸೇವೆಗಳು ಅರ್ಜಿದಾರರು ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ, ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಪಾಸ್‌ ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಎಲ್ಲಾ ಮೂಲ ದಾಖಲೆಗಳು ಹಾಗೂ ಅವುಗಳ ಪ್ರತಿಗಳನ್ನು ಕಡ್ಡಾಯವಾಗಿ ಪರಿಶೀಲನೆಗಾಗಿ ತರಬೇಕು ಮತ್ತು ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಈ ಮೇಲಿನ ಎಲ್ಲಾ ರೀತಿಯ ನಾನಾ ಗ್ರಾಹಕರ ಗದಗ ಸಿಟಿ ಪಾಸ್ ಪೋರ್ಟ್ ಸೇವಾ ಕೇಂದ್ರ ಎಂದು ಆಯ್ಕೆ ಮಾಡಿಕೊಳ್ಳಬೇಕು. ಪಾಸ್‌ ಪೋರ್ಟ್ ಸಂಬಂಧಿತ ಎಲ್ಲಾ ಸೇವೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯುವಂತೆ ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್. ಶಿರಹಟ್ಟಿ ಪತ್ರಿಕಾ ಪ್ರಕಟನೆ ಮೂಲಕ ತಿಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande