ಯುಎಸ್ ಸೇನಾ ಮುಖ್ಯಸ್ಥ ಜನರಲ್ ಹುದ್ದೆಯಿಂದ ರಾಂಡಿ ಜಾರ್ಜ್ ವಜಾ
ವಾಷಿಂಗ್ಟನ್, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಇರಾನ್ನೊಂದಿಗೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ, ಅಮೆರಿಕದ ಸೇನಾ ಮುಖ್ಯಸ್ಥರಾದ ಜನರಲ್ ರಾಂಡಿ ಜಾರ್ಜ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ರಾಜೀನಾಮೆ ನೀಡಿ ತಕ್ಷಣ ನಿವೃ
Randy jarge


ವಾಷಿಂಗ್ಟನ್, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಇರಾನ್ನೊಂದಿಗೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ, ಅಮೆರಿಕದ ಸೇನಾ ಮುಖ್ಯಸ್ಥರಾದ ಜನರಲ್ ರಾಂಡಿ ಜಾರ್ಜ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ರಾಜೀನಾಮೆ ನೀಡಿ ತಕ್ಷಣ ನಿವೃತ್ತಿ ಪಡೆಯುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

ಪೆಂಟಗನ್ ಮುಖ್ಯ ವಕ್ತಾರ ಸೀನ್ ಪಾರ್ನೆಲ್ ಪ್ರಕಟಣೆಯಲ್ಲಿ, “ಜನರಲ್ ಜಾರ್ಜ್ ಅವರು ಸೇನೆಯ 41ನೇ ಮುಖ್ಯಸ್ಥರಾಗಿ ನೀಡಿದ ದೀರ್ಘಕಾಲದ ಸೇವೆಗೆ ಕೃತಜ್ಞರಾಗಿದ್ದೇವೆ. ಅವರು ತಕ್ಷಣದಿಂದ ಜಾರಿಗೆ ಬರುವಂತೆ ನಿವೃತ್ತಿಯಾಗುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಕ್ರಮದೊಂದಿಗೆ, ಇತರ ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಜನರಲ್ ಡೇವಿಡ್ ಹಾಡ್ನೆ ಮತ್ತು ಮೇಜರ್ ಜನರಲ್ ವಿಲಿಯಂ ಗ್ರೀನ್ ಅವರನ್ನು ಸಹ ಅವರ ಹುದ್ದೆಗಳಿಂದ ವಜಾಗೊಳಿಸಲಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಜನರಲ್ ಜಾರ್ಜ್ ಅವರು ಹಿಂದೆ ರಕ್ಷಣಾ ಕಾರ್ಯದರ್ಶಿಯಾಗಿದ್ದ ಲಾಯ್ಡ್ ಆಸ್ಟಿನ್ ಅವರ ಹಿರಿಯ ಸೈನಿಕ ಸಹಾಯಕರಾಗಿ (2021–2022) ಸೇವೆ ಸಲ್ಲಿಸಿದ್ದರು. ವೃತ್ತಿಪರ ಪದಾತಿ ದಳದ ಅಧಿಕಾರಿ ಹಾಗೂ ವೆಸ್ಟ್ ಪಾಯಿಂಟ್ ಪದವೀಧರರಾದ ಅವರು ಮೊದಲ ಕೊಲ್ಲಿ ಯುದ್ಧ ಸೇರಿದಂತೆ ಇರಾಕ್ ಮತ್ತು ಅಫ್ಘಾನಿಸ್ತಾನ ಯುದ್ಧಗಳಲ್ಲಿ ಸೇವೆ ಸಲ್ಲಿಸಿದ್ದರು.

ಇದಲ್ಲದೆ, ಜಂಟಿ ಮುಖ್ಯಸ್ಥರ ಅಧ್ಯಕ್ಷ ಸಿ.ಕ್ಯೂ. ಬ್ರೌನ್, ನೌಕಾ ಕಾರ್ಯಾಚರಣೆಗಳ ಮುಖ್ಯಸ್ಥ ಅಡ್ಮಿರಲ್ ಲಿಸಾ ಫ್ರಾಂಚೆಟ್ಟಿ, ವಾಯುಪಡೆಯ ಉಪಾಧ್ಯಕ್ಷ ಜೇಮ್ಸ್ ಸ್ಲೈಫ್ ಹಾಗೂ ರಕ್ಷಣಾ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಜೆಫ್ರಿ ಕ್ರೌಸ್ ಸೇರಿದಂತೆ ಹಲವರನ್ನೂ ಹುದ್ದೆಯಿಂದ ತೆಗೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಮಾನ್ಯವಾಗಿ ಸೇನಾ ಮುಖ್ಯಸ್ಥರ ಅವಧಿ ನಾಲ್ಕು ವರ್ಷಗಳಿರುತ್ತದೆ. ಜನರಲ್ ಜಾರ್ಜ್ ಅವರನ್ನು ಅಧ್ಯಕ್ಷ ಜೋ ಬೈಡನ್ 2023ರಲ್ಲಿ ನಾಮನಿರ್ದೇಶನ ಮಾಡಿದ್ದು, ಸೆನೆಟ್ ಅನುಮೋದಿಸಿತ್ತು. ಈ ಹಿನ್ನೆಲೆ ಅವರು 2027ರವರೆಗೆ ಸೇವೆ ಸಲ್ಲಿಸುವ ನಿರೀಕ್ಷೆ ಇತ್ತು.

ಪ್ರಸ್ತುತ ಸೇನೆಯ ಉಪ ಮುಖ್ಯಸ್ಥರಾದ ಕ್ರಿಸ್ಟೋಫರ್ ಲಾನೆವ್ ಅವರನ್ನು ಹಂಗಾಮಿ ಸೇನಾ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಅವರು ಈ ಹಿಂದೆ 82ನೇ ಏರ್ಬೋನ್ ವಿಭಾಗದ ಕಮಾಂಡಿಂಗ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ಪೆಂಟಗನ್ ವಕ್ತಾರ ಪಾರ್ನೆಲ್ ಅವರ ಪ್ರಕಾರ, ಲಾನೆವ್ ಅವರು ಅನುಭವಸಂಪನ್ನ ಹಾಗೂ ಯುದ್ಧಪರೀಕ್ಷಿತ ನಾಯಕರು. ಅವರು ಆಡಳಿತದ ರಕ್ಷಣಾ ದೃಷ್ಟಿಕೋನವನ್ನು ಯಶಸ್ವಿಯಾಗಿ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

-

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande