ಟೆಲ್ ಅವಿವ್ ಮತ್ತು ಐಲಾತ್ ಮೇಲೆ ಇರಾನ್ ಕ್ಷಿಪಣಿ ದಾಳಿ
ಟೆಹ್ರಾನ್, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಇಸ್ರೇಲ್ ನಲ್ನ ಪ್ರಮುಖ ನಗರಗಳಾದ ಟೆಲ್ ಅವಿವ್ ಮತ್ತು ಐಲಾತ್ ಮೇಲೆ ಶುಕ್ರವಾರ ಹೊಸ ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ತಿಳಿಸಿದೆ. ಐಆರ್ಜಿಸಿ ಹೇಳಿಕೆಯ ಪ್ರಕಾರ, ಟೆಲ್ ಅವಿವ್ ಮತ
Attack


ಟೆಹ್ರಾನ್, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಇಸ್ರೇಲ್ ನಲ್ನ ಪ್ರಮುಖ ನಗರಗಳಾದ ಟೆಲ್ ಅವಿವ್ ಮತ್ತು ಐಲಾತ್ ಮೇಲೆ ಶುಕ್ರವಾರ ಹೊಸ ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ತಿಳಿಸಿದೆ.

ಐಆರ್ಜಿಸಿ ಹೇಳಿಕೆಯ ಪ್ರಕಾರ, ಟೆಲ್ ಅವಿವ್ ಮತ್ತು ಐಲಾತ್ ಪ್ರದೇಶಗಳಲ್ಲಿರುವ ಇಸ್ರೇಲಿ ಸೈನಿಕ ಹಾಗೂ ರಕ್ಷಣಾ ಕೈಗಾರಿಕಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಕೂಡ ಇರಾನ್ ಕ್ಷಿಪಣಿಗಳ ಅಲೆಗಳು ಹೊರಟಿರುವುದನ್ನು ಒಪ್ಪಿಕೊಂಡಿದ್ದು, ಅವುಗಳನ್ನು ತಡೆಗಟ್ಟಲು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ತಿಳಿಸಿದೆ.

ಅಲ್ ಜಜೀರಾ ವರದಿ ಪ್ರಕಾರ, ಇರಾನ್, ಇಸ್ರೇಲ್ ಪ್ರದೇಶದತ್ತ ಇನ್ನಷ್ಟು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ವಾಯು ರಕ್ಷಣಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.

ಇದರ ಮಧ್ಯೆ, ಇರಾಕ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಯಾ ಸಶಸ್ತ್ರ ಸಂಘಟನೆ ಸರಯಾ ಅವ್ಲಿಯಾ ಅಲ್-ಡ್ಯಾಮ್ ಕಳೆದ 24 ಗಂಟೆಗಳಲ್ಲಿ ಅಮೆರಿಕದ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಐದು ದಾಳಿಗಳನ್ನು ನಡೆಸಿರುವುದಾಗಿ ಹೇಳಿದೆ.

ಅದೇ ರೀತಿಯಲ್ಲಿ, ಇರಾನ್ ಬೆಂಬಲಿತ ಶಿಯಾ ಮಿಲಿಟಿಯಾ ಸಂಘಟನೆಗಳ ಒಕ್ಕೂಟವಾದ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ ತನ್ನ ಹೋರಾಟಗಾರರು ಕಳೆದ 24 ಗಂಟೆಗಳಲ್ಲಿ ಇರಾಕ್ ಹಾಗೂ ಪ್ರದೇಶದ ಇತರೆ ಭಾಗಗಳಲ್ಲಿ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು 23 ದಾಳಿಗಳನ್ನು ನಡೆಸಿರುವುದಾಗಿ ಹೇಳಿಕೊಂಡಿದೆ.

ಇನ್ನೊಂದೆಡೆ, ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್ ದಾಳಿಗಳ ಪರಿಣಾಮವಾಗಿ 600ಕ್ಕೂ ಹೆಚ್ಚು ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಹಾನಿಗೊಳಗಾಗಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆ, ಕುವೈತ್ ಸೇನೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳಿಗೆ ಪ್ರತಿಕ್ರಿಯಿಸುವ ಕ್ರಮಗಳನ್ನು ಕೈಗೊಂಡಿರುವುದಾಗಿ ಘೋಷಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande