'ಟಾಕ್ಸಿಕ್’ ಚಿತ್ರ ಬಿಡುಗಡೆ ಮುಂದೂಡಿಕೆ
ಬೆಂಗಳೂರು, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಟ-ನಿರ್ಮಾಪಕ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಬಿಡುಗಡೆಯ ದಿನಾಂಕವನ್ನು ಮುಂದೂಡಿರುವುದಾಗಿ ಘೋಷಿಸಿದ್ದಾರೆ. ಆರಂಭದಲ್ಲಿ ಜೂನ್ 4ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಇದೀಗ ಜಾಗತಿಕ ಮಟ್ಟದಲ್ಲಿ ಸಮನ್ವಯಗೊಂಡ ಹೊಸ ದಿನಾಂಕದಲ್ಲಿ ಬಿಡುಗಡೆ
Toxic press release


ಬೆಂಗಳೂರು, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಟ-ನಿರ್ಮಾಪಕ ಯಶ್ ತಮ್ಮ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಬಿಡುಗಡೆಯ ದಿನಾಂಕವನ್ನು ಮುಂದೂಡಿರುವುದಾಗಿ ಘೋಷಿಸಿದ್ದಾರೆ. ಆರಂಭದಲ್ಲಿ ಜೂನ್ 4ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಇದೀಗ ಜಾಗತಿಕ ಮಟ್ಟದಲ್ಲಿ ಸಮನ್ವಯಗೊಂಡ ಹೊಸ ದಿನಾಂಕದಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಎಕ್ಸನಲ್ಲಿ ಮಾಹಿತಿ ನೀಡಿರುವ ನಟ ಯಶ್, “ನಾವು ನಿರ್ಮಿಸುವ ಕೆಲವು ಸಿನಿಮಾಗಳು ಇವೆ, ಮತ್ತೊಂದು ವರ್ಗದ ಸಿನಿಮಾಗಳು ನಮ್ಮಲ್ಲಿ ಸಿನೆಮಾ ಮೇಲಿನ ಪ್ರೀತಿ ಏಕೆ ಹುಟ್ಟಿತು ಎಂಬುದನ್ನು ಮತ್ತೆ ನೆನಪಿಸುವಂತಿರುತ್ತವೆ. ‘ಟಾಕ್ಸಿಕ್’ ಅಂತಹ ಒಂದು ಪ್ರಯಾಣವಾಗಿದೆ” ಎಂದು ತಿಳಿಸಿದ್ದಾರೆ.

ಸಿನಿಮಾಕಾನ್ ನಲ್ಲಿ ಚಿತ್ರವನ್ನು ಪ್ರದರ್ಶಿಸಿದ ವೇಳೆ ದೊರೆತ ಜಾಗತಿಕ ಪ್ರತಿಕ್ರಿಯೆ ಚಿತ್ರಕ್ಕೆ ವಿಶ್ವಮಟ್ಟದ ಅವಕಾಶಗಳ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದರು. ಈ ಹಿನ್ನೆಲೆಯಲ್ಲಿ, ಚಿತ್ರ ಈಗ ಪೂರ್ಣಗೊಂಡಿದ್ದು, ಜಾಗತಿಕ ವಿತರಣೆ ಹಾಗೂ ಪಾಲುದಾರಿಕೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

“ಭಾರತೀಯ ಸಿನೆಮಾ ಈಗ ಜಾಗತಿಕ ವೇದಿಕೆಯಲ್ಲಿ ತನ್ನದೇ ಆದ ಗುರುತು ಮೂಡಿಸುತ್ತಿರುವ ಸಮಯದಲ್ಲಿ, ನಾವು ಪ್ರತಿಯೊಬ್ಬರೂ ಗುಣಮಟ್ಟವನ್ನು ಮತ್ತಷ್ಟು ಎತ್ತುವ ಜವಾಬ್ದಾರಿ ಹೊಂದಿದ್ದೇವೆ. ಈ ಹಿನ್ನೆಲೆ, ಚಿತ್ರವನ್ನು ವಿಶ್ವದಾದ್ಯಂತ ಪರಿಣಾಮಕಾರಿಯಾಗಿ ತಲುಪಿಸಲು ನಾವು ಸಮಯ ತೆಗೆದುಕೊಳ್ಳುತ್ತಿದ್ದೇವೆ” ಎಂದು ಯಶ್ ಹೇಳಿದ್ದಾರೆ.

ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, “ಕೆಲವು ಕಥೆಗಳು ಸಹನೆಯನ್ನು ಬೇಡಿಕೊಳ್ಳುತ್ತವೆ, ಕೆಲವು ಪ್ರಯಾಣಗಳು ಅದನ್ನು ಅವಶ್ಯಕಗೊಳಿಸುತ್ತವೆ. ನಾವು ನಿಮಗೆ ಸಂಭ್ರಮಿಸಬಹುದಾದ, ಭಾರತೀಯ ಸಿನೆಮಾಕ್ಕೆ ಹೆಮ್ಮೆಯ ಕ್ಷಣವಾಗುವಂತಹ ಚಿತ್ರವನ್ನು ನೀಡುವ ಭರವಸೆ ಕೊಡುತ್ತೇವೆ” ಎಂದು ಹೇಳಿದ್ದಾರೆ.

‘ಟಾಕ್ಸಿಕ್’ ಚಿತ್ರವು ಶೀಘ್ರದಲ್ಲೇ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಯಶ ಮಾಹಿತಿ ನೀಡಿದ್ದು ದಿನಾಂಕ ತಿಳಿಸಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande