ಬೆಂಗಳೂರಿನಲ್ಲಿ ಬಿರುಗಾಳಿ-ಆಲಿಕಲ್ಲು ಮಳೆ ಅಬ್ಬರ
ಬೆಂಗಳೂರು, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ಉಷ್ಣತೆಯಿಂದ ಕಂಗಾಲಾಗಿದ್ದ ಬೆಂಗಳೂರು ನಿವಾಸಿಗಳಿಗೆ ಬುಧವಾರ ಸಂಜೆ ವರುಣ ತಂಪೆರೆದಿದ್ದಾನೆ. ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಬಿರುಗಾಳಿ, ಗುಡುಗು ಹಾಗೂ ಆಲಿಕಲ್ಲು ಸಮೇತ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ನಗರದ ವಿವಿಧ ಭಾಗಗಳಾದ
ಬೆಂಗಳೂರಿನಲ್ಲಿ ಬಿರುಗಾಳಿ-ಆಲಿಕಲ್ಲು ಮಳೆ ಅಬ್ಬರ


ಬೆಂಗಳೂರು, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಉಷ್ಣತೆಯಿಂದ ಕಂಗಾಲಾಗಿದ್ದ ಬೆಂಗಳೂರು ನಿವಾಸಿಗಳಿಗೆ ಬುಧವಾರ ಸಂಜೆ ವರುಣ ತಂಪೆರೆದಿದ್ದಾನೆ. ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಬಿರುಗಾಳಿ, ಗುಡುಗು ಹಾಗೂ ಆಲಿಕಲ್ಲು ಸಮೇತ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು.

ನಗರದ ವಿವಿಧ ಭಾಗಗಳಾದ ಮೆಜೆಸ್ಟಿಕ್, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ಮಲ್ಲೇಶ್ವರಂ, ಜಯನಗರ, ಜೆ.ಪಿ ನಗರ, ಹೆಬ್ಬಾಳ ಹಾಗೂ ವಿಧಾನಸೌಧ ಸುತ್ತಮುತ್ತ ಮಳೆಯ ಆರ್ಭಟ ತೀವ್ರವಾಗಿದ್ದು. ದಿಢೀರ್ ಸುರಿದ ಮಳೆಯಿಂದ ವಾಹನ ಸವಾರರು ಫ್ಲೈಓವರ್ಗಳು, ಸ್ಕೈವಾಕ್ಗಳ ಕೆಳಗೆ ಆಶ್ರಯ ಪಡೆಯುವಂತಾಯಿತು.

ಬಿಸಿಲಿನ ನಡುವೆ ಏಕಾಏಕಿ ಸುರಿದ ಮಳೆಯಿಂದ ರಸ್ತೆಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಹೆಚ್ಚಾಯಿತು. ಕೆಲವೆಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತತಗೊಂಡಿತ್ತು.

ಭಾರೀ ಗಾಳಿ-ಮಳೆಯಿಂದಾಗಿ ಶೇಷಾದ್ರಿಪುರಂ–ಮಲ್ಲೇಶ್ವರಂ ರಸ್ತೆ ನಡುವೆ ದೊಡ್ಡ ಮರ ಧರೆಗುರುಳಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಮಳೆಯ ದಿಢೀರ್ ಅಬ್ಬರದಿಂದ ಹಲವೆಡೆ ವಿದ್ಯುತ್ ವ್ಯತ್ಯಯದ ಭೀತಿ ಉಂಟಾಗಿದ್ದು, ನಗರ ನಿವಾಸಿಗಳು ತೊಂದರೆ ಅನುಭವಿಸಿದರು. ಬಿಸಿಲಿನಿಂದ ತಾತ್ಕಾಲಿಕ ಪರಿಹಾರ ಸಿಕ್ಕರೂ, ಅಕಾಲಿಕ ಮಳೆ ಅನೇಕ ಸಮಸ್ಯೆಗಳನ್ನು ತಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande