ತಿರುಪತಿ ತಿಮ್ಮಪ್ಪನ ಸೇವೆಗೆ ‘ನಂದಿನಿ ತುಪ್ಪ’ ಪೂರೈಕೆ ಆರಂಭ
ಬೆಂಗಳೂರು, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಜ್ಯದ ಹೆಮ್ಮೆಯ ಉತ್ಪನ್ನವಾದ ನಂದಿನಿ ತುಪ್ಪವನ್ನು ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿತ್ಯ ಸೇವೆಗೆ ಪೂರೈಸುವ ಕಾರ್ಯಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಯಿತು. ಬೆಂಗಳೂರು ಡೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹ
ಚಾಲನೆ


ಬೆಂಗಳೂರು, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಜ್ಯದ ಹೆಮ್ಮೆಯ ಉತ್ಪನ್ನವಾದ ನಂದಿನಿ ತುಪ್ಪವನ್ನು ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿತ್ಯ ಸೇವೆಗೆ ಪೂರೈಸುವ ಕಾರ್ಯಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಯಿತು.

ಬೆಂಗಳೂರು ಡೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ವತಿಯಿಂದ ದೇವಸ್ಥಾನಕ್ಕೆ ನಂದಿನಿ ತುಪ್ಪ ಸಾಗಿಸುವ ವಾಹನಕ್ಕೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪರಿಶುದ್ಧತೆಗೆ ಮತ್ತೊಂದು ಹೆಸರೇ ನಂದಿನಿ ತುಪ್ಪ. ಈಗ ಈ ತುಪ್ಪವನ್ನು ತಿರುಪತಿ ತಿಮ್ಮಪ್ಪನ ನಿತ್ಯ ನೈವೇದ್ಯ ಹಾಗೂ ಪ್ರಸಾದದಲ್ಲಿ ಬಳಸಲಾಗುತ್ತಿರುವುದು ನಮ್ಮ ನಾಡಿನ ಹೆಮ್ಮೆ ಮತ್ತು ಸೌಭಾಗ್ಯ” ಎಂದು ಹೇಳಿದರು.

ತಿರುಪತಿ ಶ್ರೀನಿವಾಸನ ಆಶೀರ್ವಾದದಿಂದ ರಾಜ್ಯದ ರೈತರಿಗೆ ಮತ್ತಷ್ಟು ಬೆಂಬಲ ದೊರೆಯಲಿ, ಹೈನೋದ್ಯಮ ಬೆಳೆಯಲಿ ಮತ್ತು ನಂದಿನಿ ತುಪ್ಪದ ಉತ್ಪಾದನೆ ಇನ್ನಷ್ಟು ಹೆಚ್ಚಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande