

ಬಳ್ಳಾರಿ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜನತಾ ಬಜಾರ್ (ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ)ನ ನೂತನ ಅಧ್ಯಕ್ಷರಾಗಿ ಶ್ರೀಮತಿ ಮೈತ್ರಿ ಪಲ್ಲೇದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾಗಿದ್ದ ಕೆ.ಎ. ವೇಮಣ್ಣ ಅವರು ರಾಜೀನಾಮೆ ನೀಡಿದ್ದ ಕಾರಣ, ನೂತನ ಅಧ್ಯಕ್ಷರ ಆಯ್ಕೆಗಾಗಿ ಬುಧವಾರ ಚುನಾವಣೆ ನಡೆದು, ಅವಿರೋಧ ಆಯ್ಕೆ ನಡೆಯಿತು.
ಶ್ರೀಮತಿ ಪಲ್ಲೇದ ಮೈತ್ರಿ ಅವರ ನಾಮಪತ್ರಕ್ಕೆ ಜಿ. ನೀಲಕಂಠಪ್ಪ ಮತ್ತು ಶ್ರೀಮತಿ ನಸೀಮಾಬೇಗಂ ಅವರು ಸೂಚಕರಾಗಿ - ಅನುಮೋದಕರಾಗಿ ಸಹಿ ಮಾಡಿದ್ದರು.
ನಿರ್ದೇಶಕರುಗಳಾದ ಕೆ.ಎ. ವೇವಣ್ಣ, ಉಪಾಧ್ಯಕ್ಷರಾದ ಎಸ್. ಮುಜಾಹಿದ್ ಅಲಿ, ನಿರ್ದೇಶಕರುಗಳಾದ ವೆಂಕಟೇಶ್ ಹೆಗಡೆ, ಶ್ರೀಮತಿ ನಸೀಮಾಬೇಗಂ, ಪಿ. ದಾನರೆಡ್ಡಿ, ವಿ. ಪ್ರದೀಪರೆಡ್ಡಿ, ಕೆ. ಭರಮರೆಡ್ಡಿ, ಹಲಕುಂದಿ ವಿಜಯಕುಮಾರ್, ಕೆ.ಎಂ. ಕೇದಾರನಾಥ, ಜಿ. ನೀಲಕಂಠಪ್ಪ, ಕೋರಿ ಚನ್ನಬಸಪ್ಪ (ಪುಟ್ಟ), ಎಂ. ನರೇಶಕುಮಾರ್, ಕೆ. ವೆಂಕಟಸ್ವಾಮಿ, ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ ಪರಿಣಿತ ಸದಸ್ಯರಾರ ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್, ವೀರಶೈವ ತರುಣ ಸಂಘದ ಅಧ್ಯಕ್ಷರಾದ ನಂದೀಶ್ ಮಠಂ, ಮಾಜಿ ಉಪಾಧ್ಯಕ್ಷರಾದ ಇಬ್ರಾಹಿಂ ಬಾಬು, ಜಾನೆಕುಂಟೆ ಬಸವರಾಜ್ (ಕುಮ್ಮಿ), ಪಲ್ಲೇದ ಪ್ರಭುಲಿಂಗ,ಕೋರಿ ವಿರುಪಾಕ್ಷಪ್ಪ, ಗಂಗಾವತಿ ವೀರೇಶ್, ಮುಂಡಾಸದ ಮಲ್ಲಿಕಾರ್ಜುನ, ಬಾಡದ ಬದರಿನಾಥ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಪಲ್ಲೇದ ಮೈತ್ರಿ ಅವರು ಜನತಾ ಬಜಾರ್ ನ ಎರಡನೇ ಮಹಿಳಾ ಅಧ್ಯಕ್ಷರಾಗಿರುವುದು ವಿಶೇಷ.
ಚುನಾವಣಾ ಅಧಿಕಾರಿಗಳಾಗಿ ಜನತಾ ಬಜಾರ್ ಪ್ರಧಾನ ವ್ಯವಸ್ಥಾಪಕರಾಗಿರುವ ರಾಮು ಅವರು ಚುನಾವಣೆಯನ್ನು ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್