ಸಿಂದಗಿ ಕೆರೆಯ ಬಳಿಯ ಗಾರ್ಡನ್ ಕಾಮಗಾರಿ ಪರಿಶೀಲನೆ ; ನೀರಿನ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ
ವಿಜಯಪುರ, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕೆರೆಯ ಹತ್ತಿರ ನಿರ್ಮಾಣವಾಗುತ್ತಿರುವ ಸುಂದರ ಗಾರ್ಡನ್ ಕಾಮಗಾರಿಯನ್ನು ಶಾಸಕ ಅಶೋಕ ಮನಗೂಳಿ ಪರಿಶೀಲಿಸಿ, ಅದರ ಪ್ರಗತಿ ಕುರಿತು ಸ್ಥಳದಲ್ಲೇ ವಿಮರ್ಶೆ ನಡೆಸಿದರು. ಈ ಸಂದರ್ಭದಲ್ಲಿ, ಪ್ರಸ್ತುತ ಬೇಸಿಗೆ ಹಿನ್ನಲೆಯಲ್ಲಿ
ಕೆರೆ


ವಿಜಯಪುರ, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕೆರೆಯ ಹತ್ತಿರ ನಿರ್ಮಾಣವಾಗುತ್ತಿರುವ ಸುಂದರ ಗಾರ್ಡನ್ ಕಾಮಗಾರಿಯನ್ನು ಶಾಸಕ ಅಶೋಕ ಮನಗೂಳಿ ಪರಿಶೀಲಿಸಿ, ಅದರ ಪ್ರಗತಿ ಕುರಿತು ಸ್ಥಳದಲ್ಲೇ ವಿಮರ್ಶೆ ನಡೆಸಿದರು.

ಈ ಸಂದರ್ಭದಲ್ಲಿ, ಪ್ರಸ್ತುತ ಬೇಸಿಗೆ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಯಾವುದೇ ತೊಂದರೆ ಉಂಟಾಗದಂತೆ ಕೆರೆಯ ನೀರಿನ ಸಂಗ್ರಹ ಮಟ್ಟವನ್ನೂ ಪರಿಶೀಲಿಸಲಾಯಿತು. ನೀರಿನ ಸಮರ್ಪಕ ಬಳಕೆ ಹಾಗೂ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.

ಕೆರೆಯ ನೀರನ್ನು ಸೂಕ್ತವಾಗಿ ಸಂರಕ್ಷಿಸಿ, ಪಟ್ಟಣದ ಜನತೆಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆ ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನವನ್ನು ಅವರು ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande