ಶ್ರೀಉಡುಸಲಮ್ಮ ದೇವಿಗೆ ಸೇವೆ : ಶಾಸಕ ನಾರಾ ಭರತರೆಡ್ಡಿ
ಕುರುಗೋಡು, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ನನ್ನ ತಂದೆ ನಾರಾ ಸೂರ್ಯನಾರಾಯಣರೆಡ್ಡಿ ಅವರು ಖಾಲಿ ಕೈಯಲ್ಲಿ ಇಲ್ಲಿಗೆ ಬಂದಾಗ ಬಾದನಹಟ್ಟಿಯ ಶ್ರೀ ಉಡುಸಲಮ್ಮ, ಕುರುಗೋಡಿನ ಶ್ರೀದೊಡ್ಡಬಸವೇಶ್ವರ ಹಾಗೂ ಇಲ್ಲಿನ ಜನರ ಆಶೀರ್ವಾದ ಮತ್ತು ಪ್ರೀತಿಯಿಂದ ನಮ್ಮ ಕುಟುಂಬ ಬೆಳೆದಿದೆ, ದೈವದ ಮತ್ತು ನಿಮ್ಮೆಲ್ಲರ
ಶ್ರೀಉಡುಸಲಮ್ಮ ದೇವಿಗೆ ಸೇವೆ :ಶಾಸಕ ನಾರಾ ಭರತರೆಡ್ಡಿ


ಶ್ರೀಉಡುಸಲಮ್ಮ ದೇವಿಗೆ ಸೇವೆ :ಶಾಸಕ ನಾರಾ ಭರತರೆಡ್ಡಿ


ಕುರುಗೋಡು, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನನ್ನ ತಂದೆ ನಾರಾ ಸೂರ್ಯನಾರಾಯಣರೆಡ್ಡಿ ಅವರು ಖಾಲಿ ಕೈಯಲ್ಲಿ ಇಲ್ಲಿಗೆ ಬಂದಾಗ ಬಾದನಹಟ್ಟಿಯ ಶ್ರೀ ಉಡುಸಲಮ್ಮ, ಕುರುಗೋಡಿನ ಶ್ರೀದೊಡ್ಡಬಸವೇಶ್ವರ ಹಾಗೂ ಇಲ್ಲಿನ ಜನರ ಆಶೀರ್ವಾದ ಮತ್ತು ಪ್ರೀತಿಯಿಂದ ನಮ್ಮ ಕುಟುಂಬ ಬೆಳೆದಿದೆ, ದೈವದ ಮತ್ತು ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಶಾಸಕ ನಾರಾ ಭರತರೆಡ್ಡಿ ಅವರು ಮನವಿ ಮಾಡಿದ್ದಾರೆ.

ಬಾದನಹಟ್ಟಿ ಗ್ರಾಮದಲ್ಲಿ ಮರು ನಿರ್ಮಾಣಗೊಂಡ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಪೂಜೆಯಲ್ಲಿ ಬುಧವಾರ ಪಾಲ್ಗೊಂಡು, ಮಾತನಾಡಿದ ಅವರು, ಈ ಊರಿನ ಅಭಿವೃದ್ಧಿಗೆ ಮತ್ತು ಇಲ್ಲಿಯ ದೈವದ ಅಭಿವೃದ್ಧಿಗೆ ಕೈಲಾದಮಟ್ಟಿಗೆ ಶ್ರಮಿಸುತ್ತಿದ್ದೇವೆ ಎಂದರು.

ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಂ. ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಚಾನಾಳ್ ಶೇಖರ್, ಉದ್ಯಮಿ ಸತೀಶ್ ರೆಡ್ಡಿ, ಊರಿನ ಪ್ರಮುಖರಾದ ಮೇಟಿ ಬಸಪ್ಪ, ಹನುಮಂತ ರೆಡ್ಡಿ, ತಿಮ್ಮಪ್ಪ, ಗೋವಿಂದಪ್ಪ, ಬಸಪ್ಪಯ್ಯ, ಮಣೂರು ಜಡೆಪ್ಪ, ಕರೆಣ್ಣ, ಹೆಚ್.ಈಶ್ವರಗೌಡ, ಪರಶುರಾಮ ಇನ್ನಿತರರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande