ಜಯಮಂಗಲದಲ್ಲಿ ಗಾನ ಸುಧಾ ಸಂಸ್ಥೆಯಿ0ದ ಸಂಗೀತ ತರಗತಿ
ಜಯಮಂಗಲದಲ್ಲಿ ಗಾನ ಸುಧಾ ಸಂಸ್ಥೆಯಿ0ದ ಸಂಗೀತ ತರಗತಿ
ಸಂಗೀತ ಕಲಾವಿದ ಕೆ.ಗೌತಮ್


ಕೋಲಾರ, ೨೯ ಏಪ್ರಿಲ್ (ಹಿ.ಸ) :

ಆ್ಯಂಕರ್ : ಮಾಲೂರು ತಾಲೂಕಿನ ಜಯಮಂಗಲ ಗ್ರಾಮದ ಪ್ರಸಿದ್ಧ 'ಗಾನ ಸುಧಾ ಸಾಂಸ್ಕೃತಿಕ ಸಂಸ್ಥೆ'ಯ ವತಿಯಿಂದ ಸಾರ್ವಜನಿಕರಿಗಾಗಿ ವಿವಿಧ ಪ್ರಕಾರದ ಸಂಗೀತ ತರಗತಿಗಳು ಹಾಗೂ ವಿಶೇಷ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ತರಗತಿಗಳ ವಿಶೇಷವೆಂದರೆ ಇಲ್ಲಿ ಕಲಿಯಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ; ಆಸಕ್ತಿಯಿರುವ ಎಲ್ಲಾ ವಯೋಮಾನದವರು ಭಾಗವಹಿಸಬಹುದಾಗಿದೆ.

ಸಂಸ್ಥೆಯಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಕ್ತಿ ಸಂಗೀತ, ವಚನ ಸಂಗೀತ ಹಾಗೂ ತತ್ವಪದ ಗಾಯನವನ್ನು ಅತ್ಯಂತ ಶಿಸ್ತುಬದ್ಧವಾಗಿ ಕಲಿಸಿಕೊಡಲಾಗುತ್ತದೆ. ಗಾಯನದ ಜೊತೆಗೆ ಹಾರ್ಮೋನಿಯಂ ವಾದನವನ್ನು ಕಲಿಯಲು ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಬೇಸಿಗೆಯ ರಜಾ ದಿನಗಳನ್ನು ಸದುಪಯೋಗಪಡಿಸಿಕೊಳ್ಳಲು ಆಸಕ್ತರಿಗಾಗಿ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿಯುಳ್ಳವರು ಇದರ ಸೌಲಭ್ಯ ಪಡೆಯಬಹುದಾಗಿದೆ.

ತರಗತಿಗಳ ಸಮಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಗಾನ ಸುಧಾ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರನ್ನು ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಲು ಕೋರಲಾಗಿದೆ: ೯೯೬೪೨ ೫೮೧೮೦ ಅಥವಾ ೯೧೧೩೧ ೧೮೧೮೦.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande