
ಕೊಪ್ಪಳ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಸಿದ್ಧ ರಾಯರ ಮಠಕ್ಕೆ ಸಂಬಂಧಿಸಿದಂತೆ ಕಾನೂನು ಬದ್ಧವಾಗಿಯೇ ಭಕ್ತರ ಆಶಯದಂತೆ ಟ್ರಸ್ಟ್ ರಚನೆ ಮಾಡಲಾಗಿದೆ ಎಂದು ಮಠದ ವ್ಯವಸ್ಥಾಪಕ ಜಗನ್ನಾಥಚಾರ್ಯ ಹುನಗುಂದ ಅವರು ಹೇಳಿದ್ದಾರೆ.
ಮಠದ ಟ್ರಸ್ಟ್ ರಚನೆ ಕುರಿತು ಇದು ಕಾನೂನುಬಾಹಿರವೆಂದು ಕೃಷ್ಣಮೂರ್ತಿ ಇಟಗಿ, ಗುರುಪ್ರಸಾದ ಇಟಗಿ, ರವೀಂದ್ರ ಕೆರೂರು, ಸ್ವಾಮಿರಾಚಾರ್ಯ ಜೋಶಿ ಗುನ್ನಾಳ (ಅಪ್ಪಣ್ಣ) ಮತ್ತು ಪ್ರಾಣೇಶ ಮಾದನೂರು ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ’ಭಕ್ತಾದಿಗಳ ಮತ್ತು ಹಿತೈಷಿಗಳ ಸಮ್ಮತಿಯಿಂದ ಮಠಕ್ಕೆ ನೂತನ ಟ್ರಸ್ಟ್ ರಚಿಸಲಾಗಿದೆ ಎಂದಿದ್ದಾರೆ.
ಹಿಂದಿನ ಅಧ್ಯಕ್ಷರಾಗಿದ್ದ ದಿವಂಗತ ರಂಗನಾಥಾಚಾರ್ಯ ಹುಲಗಿ ಅವರ ಕಾಲಘಟ್ಟದಲ್ಲಿ ಯಾವುದೇ ಟ್ರಸ್ಟ್ ನೋಂದಣಿಯಾಗಿಲ್ಲ, ಅಲ್ಲದೆ ಅವರ ಮರಣದ ನಂತರ ಅವರ ಪುತ್ರ ಅನಂತಾಚಾರ್ಯ ಹುಲಗಿ ಅವರನ್ನೇ ಟ್ರಸ್ಟ್ನ ಅಧ್ಯಕ್ಷರನ್ನಾಗಿ ಮಾಡಿ ಟ್ರಸ್ಟ್ ಕಾನೂನುಬದ್ಧವಾಗಿ ನೋಂದಣಿ ಮಾಡಿಸಲಾಗಿದೆ. ರಂಗನಾಥಾಚಾರ್ಯ ಹುಲಗಿ ಅವರ ಜೀವಿತ ಕಾಲದಲ್ಲಿ ಮಂತ್ರಾಲಯದ ರಾಘವೇಂದ್ರ ಮಠಕ್ಕೆ ಟ್ರಸ್ಟ್ನ ಅಧಿಕಾರ ಬಿಟ್ಟುಕೊಡುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಆದ್ದರಿಂದ ಸಾರ್ವಜನಿಕವಾಗಿ ತಪ್ಪು ಕಲ್ಪನೆಗಳು ಹಾಗೂ ವದಂತಿಗೆ ಕಿವಿಗೊಡಬಾರದು ಎಂದು ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್