ವಿಜಯಪುರದಲ್ಲಿ ಯಶಸ್ವಿ ಪುಸ್ತಕ ಮೇಳ ; ₹5 ಲಕ್ಷಕ್ಕೂ ಅಧಿಕ ವಹಿವಾಟು
ವಿಜಯಪುರ, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಿಜಯಪುರದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಪುಸ್ತಕ ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ₹5 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿರುವುದು ಗಮನಾರ್ಹವಾಗಿದೆ. ಮೇಳದ ಅವಧಿಯಲ್ಲಿ ಪುಸ್ತಕ ಖರೀದಿಗೆ ಜನಸ್ತೋಮವೇ ಹರಿದು ಬಂದಿದ್ದು, ವಿಶೇಷ
ಮೇಳ


ವಿಜಯಪುರ, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಿಜಯಪುರದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಪುಸ್ತಕ ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ₹5 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿರುವುದು ಗಮನಾರ್ಹವಾಗಿದೆ. ಮೇಳದ ಅವಧಿಯಲ್ಲಿ ಪುಸ್ತಕ ಖರೀದಿಗೆ ಜನಸ್ತೋಮವೇ ಹರಿದು ಬಂದಿದ್ದು, ವಿಶೇಷವಾಗಿ ಯುವ ಜನತೆಯಲ್ಲಿ ಪುಸ್ತಕಗಳ ಮೇಲಿನ ಆಸಕ್ತಿ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇ ಸಾಹಿತ್ಯ ಬಳಗದ ಸದಸ್ಯ ಅನೀಲ ಹೊಸಮನಿ, “ಬುದ್ಧ, ಬಸವ ಹಾಗೂ ಬಾಬಾಸಾಹೇಬರ ತತ್ವ-ಆದರ್ಶಗಳ ಆಧಾರದಲ್ಲಿ ಸಮ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಿರುವ ಯುವ ಜನತೆಗೆ ಓದಿನ ಒಲವು ಬೆಳೆಸುವ ಉದ್ದೇಶದಿಂದ ಈ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು” ಎಂದು ಹೇಳಿದರು.

“ನಮ್ಮ ಕರೆಗೆ ಸ್ಪಂದಿಸಿ 35ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದವು. ವಿಜಯಪುರದಲ್ಲಿ ಪುಸ್ತಕ ಖರೀದಿ ಕಡಿಮೆ ಎಂಬ ಅಭಿಪ್ರಾಯ ಇದ್ದರೂ, ಮೇಳಕ್ಕೆ ಬಂದ ಪ್ರಕಾಶಕರು ಜನರ ಸ್ಪಂದನೆ ಕಂಡು ತಮ್ಮ ಮನೋಭಾವವನ್ನು ಬದಲಿಸಿಕೊಂಡಿದ್ದಾರೆ. ಜನರು ಉತ್ಸಾಹದಿಂದ ಪುಸ್ತಕಗಳನ್ನು ಖರೀದಿಸಿರುವುದು, ₹5 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿರುವುದು ಓದುವ ಸಂಸ್ಕೃತಿಗೆ ದೊರೆತ ದೊಡ್ಡ ಬೆಂಬಲವಾಗಿದೆ” ಎಂದು ಅವರು ಹೇಳಿದರು.

ಇನ್ನೂ, “ಸಾಮಾನ್ಯ ಬಡ ಕುಟುಂಬದಿಂದ ಬಂದವರೇ ಈ ಮೇಳವನ್ನು ಸಂಘಟಿಸಿದ್ದು, ಅನೇಕರು ಉದಾರ ಸಹಾಯ ನೀಡಿದ ಕಾರಣ ಇದು ಯಶಸ್ವಿಯಾಗಿದೆ. ಸ್ವಯಂ ಪ್ರೇರಿತವಾಗಿ ದುಡಿದ ತಂಡದ ಶ್ರಮ ಇದರಲ್ಲಿ ಅಡಕವಾಗಿದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೇ ಸಾಹಿತ್ಯ ಬಳಗದ ಪ್ರಮುಖರಾದ ಚೆನ್ನು ಕಟ್ಟಿಮನಿ, ಲಾಯಪ್ಪ ಇಂಗಳೆ, ವೈ.ಎಸ್. ಗುಣಕಿ, ಸಾಯಬಣ್ಣ ಹಳ್ಳಿ, ಸೋಮಲಿಂಗ ರಣದೇವಿ, ಲಿಂಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande