ಭೂಮಿಯ ಸಂರಕ್ಷಣೆ ಮಾನವೀಯತೆಯ ಪ್ರಮುಖ ಜವಾಬ್ದಾರಿ : ಪ್ರಧಾನಿ ಮೋದಿ
ನವದೆಹಲಿ, 22 ಏಪ್ರಿಲ್ (ಹಿ.ಸ.) : ಆ್ಯಂಕರ್ : ಭೂಮಿಯನ್ನು ತಾಯಿ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದರ ಸಂರಕ್ಷಣೆಯು ಮಾನವೀಯತೆಯ ಕಲ್ಯಾಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ವಿಶ್ವ ಭೂ ದಿನದ ಅಂಗವಾಗಿ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನ
PM file photo


ನವದೆಹಲಿ, 22 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭೂಮಿಯನ್ನು ತಾಯಿ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದರ ಸಂರಕ್ಷಣೆಯು ಮಾನವೀಯತೆಯ ಕಲ್ಯಾಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ವಿಶ್ವ ಭೂ ದಿನದ ಅಂಗವಾಗಿ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ, ಭೂಮಿಯನ್ನು ರಕ್ಷಿಸುವುದು ಕೇವಲ ನಮ್ಮ ಕರ್ತವ್ಯವಲ್ಲ, ಮುಂಬರುವ ಪೀಳಿಗೆಗಳ ಬಗೆಗಿನ ಪವಿತ್ರ ಸಂಕಲ್ಪವೂ ಆಗಿದೆ ಎಂದು ತಿಳಿಸಿದ್ದಾರೆ.

ಪ್ರಕೃತಿ ಸಂರಕ್ಷಣೆಯ ಸಂದೇಶ ಸಾರುವ ಸಂಸ್ಕೃತ ಗಾದೆಯನ್ನು ಹಂಚಿಕೊಂಡ ಅವರು, ಮರಗಳು, ಸಸ್ಯಗಳು ಮತ್ತು ಪ್ರಕೃತಿ ಸಮತೋಲನದಿಂದ ಕೂಡಿದ ಭೂಮಿಯ ಮಹತ್ವವನ್ನು ಒತ್ತಿಹೇಳಿದರು.

“ಮರಗಳು ಎಲ್ಲಿ ಬೆಳೆಯುತ್ತವೆಯೋ, ಸಸ್ಯಗಳು ಎಲ್ಲಿ ವೃದ್ಧಿಯಾಗುತ್ತವೆಯೋ, ಅಲ್ಲಿ ಭೂಮಿಯು ಸಮೃದ್ಧಿಯಾಗುತ್ತದೆ. ನಾವು ಭೂಮಿಯ ಶೋಷಣೆಯನ್ನು ಬಯಸುವುದಿಲ್ಲ, ಅದರ ಪೋಷಣೆಯನ್ನು ಬಯಸುತ್ತೇವೆ” ಎಂದು ಪ್ರಧಾನಿ ಹೇಳಿದ್ದಾರೆ.

ಹಸು ಹೇಗೆ ತನ್ನ ಹಾಲಿನ ಮೂಲಕ ಲೋಕವನ್ನು ಪೋಷಿಸುತ್ತದೆಯೋ, ಅದೇ ರೀತಿ ಮರಗಳು ಮತ್ತು ಸಸ್ಯಗಳಿಂದ ಸಮೃದ್ಧವಾಗಿರುವ ಭೂಮಿಯು ಇಡೀ ಜಗತ್ತಿಗೆ ಪೋಷಕಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಅದರ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳದೆ, ಸಮತೋಲನದಿಂದ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಭೂಮಿಗೆ ಗೌರವ ಸಲ್ಲಿಸುವುದು, ಪ್ರಕೃತಿಯನ್ನು ಕಾಪಾಡುವುದು ಹಾಗೂ ಪರಿಸರ ಸಮತೋಲನವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande