ಕದನ ವಿರಾಮ ವಿಸ್ತರಣೆ ಘೋಷಿಸಿದ ಟ್ರಂಪ್
ವಾಷಿಂಗ್ಟನ್, 22 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನೊಂದಿಗೆ ಇರುವ ಕದನ ವಿರಾಮವನ್ನು ಮತ್ತೊಮ್ಮೆ ವಿಸ್ತರಿಸುವುದಾಗಿ ಘೋಷಿಸಿದ್ದು, ಇರಾನ್ ತನ್ನ ನಾಯಕರು ಮತ್ತು ಪ್ರತಿನಿಧಿಗಳಿಂದ ಒಗ್ಗಟ್ಟಿನ ಪ್ರಸ್ತಾಪವನ್ನು ನೀಡುವವರೆಗೆ ಶಾಂತಿ ಅವಕಾಶವನ್ನು ಮುಂದುವರಿಸಲಾ
ಟ್ರಂಪ್


ವಾಷಿಂಗ್ಟನ್, 22 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನೊಂದಿಗೆ ಇರುವ ಕದನ ವಿರಾಮವನ್ನು ಮತ್ತೊಮ್ಮೆ ವಿಸ್ತರಿಸುವುದಾಗಿ ಘೋಷಿಸಿದ್ದು, ಇರಾನ್ ತನ್ನ ನಾಯಕರು ಮತ್ತು ಪ್ರತಿನಿಧಿಗಳಿಂದ ಒಗ್ಗಟ್ಟಿನ ಪ್ರಸ್ತಾಪವನ್ನು ನೀಡುವವರೆಗೆ ಶಾಂತಿ ಅವಕಾಶವನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಂಗಳವಾರ ಮಾತನಾಡಿದ ಟ್ರಂಪ್, ಇರಾನ್ ಮತ್ತೆ ಮಾತುಕತೆಗೆ ಮರಳಬೇಕೆಂಬ ಆಶಯ ವ್ಯಕ್ತಪಡಿಸಿದರು. ಇದುವರೆಗೆ ಕದನ ವಿರಾಮದ ಗಡುವನ್ನು ಮತ್ತಷ್ಟು ವಿಸ್ತರಿಸುವುದಿಲ್ಲ ಎಂದು ಹೇಳಿದ್ದ ಅವರು, ಈಗ ತಮ್ಮ ನಿಲುವಿನಲ್ಲಿ ಬದಲಾವಣೆ ತಂದುಕೊಂಡಿದ್ದಾರೆ. ಇರಾನ್ ಪರದಿಂದ ಸ್ಪಷ್ಟ ನಿಲುವು ಹೊರಬಂದರೆ ದೊಡ್ಡ ಒಪ್ಪಂದ ಸಾಧ್ಯವಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದನಲ್ಲಿ ನಡೆಯಲಿರುವ ಶಾಂತಿ ಮಾತುಕತೆಗಳಿಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಅಮೆರಿಕದ ಹೊಸ ನಿಲುವಿನಿಂದ ಇರಾನ್ ಮೃದು ನಿಲುವು ತಾಳಬಹುದು ಎಂದು ಪಾಕಿಸ್ತಾನಿ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ರಾಜಧಾನಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಕೆಲವು ಶಾಲೆಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿದೆ.

ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ನಿಲುವು ತಾಳುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ದಿಗ್ಬಂಧನವನ್ನು ತೆಗೆದುಹಾಕಿದರೆ, ಮುಂದಿನ ದಿನಗಳಲ್ಲಿ ಇರಾನ್ನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ನಲ್ಲಿ, “ಅಮೆರಿಕ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು ಎಂದು ಇರಾನ್ ಬಯಸುತ್ತಿದೆ. ಆದರೆ ಹಾಗೆ ಮಾಡಿದರೆ, ಅವರು ಮತ್ತೆ ಒತ್ತಡ ತಂತ್ರವನ್ನು ಬಳಸುತ್ತಾರೆ” ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಇದರ ನಡುವೆಯೇ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಗಳು ಗುರುವಾರ ವಾಷಿಂಗ್ಟನ್ ನಲ್ಲಿ ನಡೆಯಲಿವೆ. ಈ ಮಾತುಕತೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ ರುಬಿಯೊ ಇಸ್ರೇಲ್ನ ಅಮೆರಿಕ ರಾಯಭಾರಿ ಮೈಕ್ ಹಕಬೀ, ಅಮೆರಿಕದ ಇಸ್ರೇಲ್ ರಾಯಭಾರಿ ಯೆಚಿಯೆಲ್ ಲೀಟರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಏಪ್ರಿಲ್ 14ರಂದು ನಡೆದ ಮೊದಲ ಸುತ್ತಿನ ಮಾತುಕತೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮಕ್ಕೆ ಒಪ್ಪಂದವಾಗಿತ್ತು. ಈಗ ಎರಡನೇ ಹಂತದ ಮಾತುಕತೆಯಲ್ಲೂ ಶಾಂತಿ ಸಾಧ್ಯತೆಯ ಬಗ್ಗೆ ಆಶಾಭಾವನೆ ವ್ಯಕ್ತವಾಗುತ್ತಿದೆ.

ಮತ್ತೊಂದೆಡೆ, ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಕದನ ವಿರಾಮದ ನಡುವೆಯೂ ಯುದ್ಧ ಸಿದ್ಧತೆಯನ್ನು ಮುಂದುವರಿಸಿರುವುದಾಗಿ ತಿಳಿಸಿದೆ. ಕಮಾಂಡರ್ ಬ್ರಾಡ್ ಕೂಪರ್, “ನಾವು ನಮ್ಮ ತಂತ್ರ ಮತ್ತು ಕಾರ್ಯಪದ್ಧತಿಗಳನ್ನು ಮರು ರೂಪಿಸುತ್ತಿದ್ದೇವೆ. ಜಗತ್ತಿನಲ್ಲಿ ನಮ್ಮಷ್ಟು ವೇಗವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲ ಸೈನ್ಯ ಮತ್ತೊಂದಿಲ್ಲ” ಎಂದು ಹೇಳಿದ್ದಾರೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರೊಂದಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande