ಇಂಧನ ಭದ್ರತೆ, ಪೂರೈಕೆ ಸರಪಳಿಗೆ ಕೇಂದ್ರದ ವಿಶೇಷ ಒತ್ತು
ನವದೆಹಲಿ, 21 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಬಂದರು ಕಾರ್ಯಾಚರಣೆಗಳು, ಇಂಧನ ಪೂರೈಕೆ ಹಾಗೂ ಹೈನುಗಾರಿಕೆ ವಲಯವು ಸಾಮಾನ್ಯ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ನಾವಿಕರು ಸುರಕ್ಷಿತರಾಗಿದ್ದು, ಹಾಲು ಮತ
ಹಾರ್ಮುಜ್ ಜಲಸಂಧಿಯ ಚಿತ್ರ


ನವದೆಹಲಿ, 21 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಬಂದರು ಕಾರ್ಯಾಚರಣೆಗಳು, ಇಂಧನ ಪೂರೈಕೆ ಹಾಗೂ ಹೈನುಗಾರಿಕೆ ವಲಯವು ಸಾಮಾನ್ಯ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ನಾವಿಕರು ಸುರಕ್ಷಿತರಾಗಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಗಳಲ್ಲಿ ಏರಿಳಿತ ಕಂಡುಬಂದಿಲ್ಲ ಎಂದು ಸರ್ಕಾರ ಹೇಳಿದೆ.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಅಂತರ-ಸಚಿವಾಲಯ ಪತ್ರಿಕಾಗೋಷ್ಠಿಯಲ್ಲಿ, ಮುಖೇಶ್ ಮಂಗಲ್ ಮಾತನಾಡಿ, ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳಲ್ಲಿ ಧಾರಕಗಳ ಪ್ರಮಾಣದಲ್ಲಿ ಗಣನೀಯ ಕುಸಿತ ದಾಖಲಾಗಿದೆ ಎಂದು ಹೇಳಿದರು. ಮಾರ್ಚ್ 8ರಂದು ಸುಮಾರು 3,383 ಕಂಟೈನರ್ಗಳಿದ್ದರೆ, ಈಗ ಅದು ಕೇವಲ 99ಕ್ಕೆ ಇಳಿದಿದ್ದು, ಶೇಕಡಾ 97ರಷ್ಟು ಕುಸಿತ ಕಂಡಿದೆ ಎಂದು ವಿವರಿಸಿದರು.

ದೇಶದಾದ್ಯಂತ ಬಂದರುಗಳ ಕಾರ್ಯಾಚರಣೆಗಳು ಸದ್ಯ ಸಾಮಾನ್ಯವಾಗಿದ್ದು, ಬಂದರು ಪ್ರದೇಶಗಳಲ್ಲಿ ಜನವಸತಿ ಕಡಿಮೆಯಾಗಿದೆ. ಎಲ್ಲ ಭಾರತೀಯ ನಾವಿಕರೂ ಸುರಕ್ಷಿತರಾಗಿದ್ದಾರೆ ಎಂದು ಅವರು ತಿಳಿಸಿದರು.

ಸಾಗರ ವಿಮೆಗೆ ಅನುಕೂಲವಾಗುವಂತೆ ಕೇಂದ್ರ ಸಚಿವ ಸಂಪುಟವು ಭಾರತ್ ಮೆರೈನ್ ಇನ್ಶೂರೆನ್ಸ್ ಪೂಲ್ ಗೆ ಈಗಾಗಲೇ ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ 12,980 ಕೋಟಿ ರೂಪಾಯಿಗಳ ಸಾರ್ವಭೌಮ ಖಾತರಿ ನಿಧಿಯನ್ನು ಮೀಸಲಿಡಲಾಗಿದೆ ಎಂದು ಮುಖೇಶ್ ಮಂಗಲ್ ಹೇಳಿದರು.

ಇದೇ ವೇಳೆ ರಣಧೀರ್ ಜೈಸ್ವಾಲ್ ಮಾತನಾಡಿ, ಭಾರತವು ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಕೊಲ್ಲಿ ರಾಷ್ಟ್ರಗಳೊಂದಿಗೆ ನಿರಂತರ ಸಂವಹನ ನಡೆಯುತ್ತಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಸೌದಿ ಅರೇಬಿಯಾ ಗೆ, ವಿದೇಶಾಂಗ ಸಚಿವರು ಯುಎಇ ಗೆ ಹಾಗೂ ಪೆಟ್ರೋಲಿಯಂ ಸಚಿವರು ಕತಾರ್ ಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.

ಇಂಧನ ಭದ್ರತೆ, ಭಾರತೀಯ ವಲಸಿಗರ ಕಲ್ಯಾಣ ಹಾಗೂ ಪೂರೈಕೆ ಸರಪಳಿಗಳ ಸುಗಮ ಕಾರ್ಯಾಚರಣೆಗೆ ಈ ಸಂವಹನ ಮತ್ತು ಸಭೆಗಳು ನೆರವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ಹೈನುಗಾರಿಕೆ ವಲಯದ ಕುರಿತು ಮಾತನಾಡಿದ ಪೂಜಾ ರಸ್ತೋಗಿ, ಬಿಕ್ಕಟ್ಟಿನ ನಡುವೆಯೂ ದೇಶದಾದ್ಯಂತ ಹಾಲಿನ ಖರೀದಿ, ಸಂಸ್ಕರಣೆ ಮತ್ತು ಪೂರೈಕೆ ಸಾಮಾನ್ಯವಾಗಿದೆ ಎಂದು ಹೇಳಿದರು.

ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆಗಳು ಸ್ಥಿರವಾಗಿದ್ದು, ಮಾರುಕಟ್ಟೆಯಲ್ಲಿ ಯಾವುದೇ ಕೊರತೆ ಇಲ್ಲ. ರೈತರಿಗೆ ನಿಯಮಿತವಾಗಿ ಹಣ ಪಾವತಿಸಲಾಗುತ್ತಿದ್ದು, ಡೈರಿ ಮೌಲ್ಯ ಸರಪಳಿಯನ್ನು ಅಡ್ಡಿಯಿಲ್ಲದೆ ಮುಂದುವರಿಸಲು ಇಲಾಖೆಯು ಹಲವು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande