ಶಿಸ್ತು ಕ್ರಮಕ್ಕೂ ಗುರಿಯಾಗಿಸುವುದಕ್ಕೂ ವ್ಯತ್ಯಾಸ ಇದೆ : ದಿನೇಶ್ ಗುಂಡೂರಾವ್
ಬೆಂಗಳೂರು, 21 ಏಪ್ರಿಲ್ (ಹಿ.ಸ.) : ಆ್ಯಂಕರ್ : ದಾವಣಗೆರೆ ಕಾಂಗ್ರೆಸ್ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್, ಶಿಸ್ತು ಕ್ರಮ ಕೈಗೊಳ್ಳುವುದಕ್ಕೂ ಒಬ್ಬರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುವುದಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮ
ಶಿಸ್ತು ಕ್ರಮಕ್ಕೂ ಗುರಿಯಾಗಿಸುವುದಕ್ಕೂ ವ್ಯತ್ಯಾಸ ಇದೆ : ದಿನೇಶ್ ಗುಂಡೂರಾವ್


ಬೆಂಗಳೂರು, 21 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದಾವಣಗೆರೆ ಕಾಂಗ್ರೆಸ್ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್, ಶಿಸ್ತು ಕ್ರಮ ಕೈಗೊಳ್ಳುವುದಕ್ಕೂ ಒಬ್ಬರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುವುದಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ಪಕ್ಷದ ಆಂತರಿಕ ವಿಚಾರವೇ ಹೊರತು ಸಾರ್ವಜನಿಕ ವಿಚಾರವಲ್ಲ. ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದನ್ನು ಸಮುದಾಯದ ವಿಚಾರಕ್ಕೆ ಜೋಡಿಸುವುದು ಸರಿಯಲ್ಲ” ಎಂದು ಹೇಳಿದರು.

ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ನಲ್ಲಿ ಸಾಕಷ್ಟು ಸ್ಥಾನಮಾನಗಳು ಸಿಕ್ಕಿವೆ. ಯಾರು ಹೇಳಿಕೊಂಡು ಅವರಿಗೆ ಅವಕಾಶ ನೀಡಿಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ಕಾಂಗ್ರೆಸ್ನ ಉದ್ದೇಶ ಎಂದು ಅವರು ತಿಳಿಸಿದರು.

“ಕಾಂಗ್ರೆಸ್ ಮಾತ್ರ ಎಲ್ಲ ಜಾತಿ, ಧರ್ಮದವರಿಗೆ ಅವಕಾಶ ನೀಡುವ ಪಕ್ಷ. ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ದೊರೆಯಬೇಕು ಎನ್ನುವುದು ನಮ್ಮ ನಿಲುವು. ಟಿಕೆಟ್ ನೀಡುವ ವಿಚಾರವೂ ಪಕ್ಷದ ಚೌಕಟ್ಟಿನೊಳಗಿನ ತೀರ್ಮಾನ” ಎಂದು ಹೇಳಿದರು.

ಅಬ್ದುಲ್ ಜಬ್ಬರ್ ಅವರನ್ನು ಅಮಾನತಿನಲ್ಲಿಟ್ಟಿದ್ದು ತಾತ್ಕಾಲಿಕ ಕ್ರಮ ಮಾತ್ರ. ಅವರನ್ನು ಮತ್ತೆ ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವ ಅವಕಾಶವೂ ಇದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ನಸೀರ್ ಅಹಮದ್ ಅವರನ್ನು ಕಾಂಗ್ರೆಸ್ ಪಕ್ಷವೇ ಎಂಎಲ್ಸಿ ಮಾಡಿದ್ದು, ಮುಖ್ಯಮಂತ್ರಿ ಅವರನ್ನೇ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ. ಅವರಿಗೆ ಮೂರು ಬಾರಿ ಎಂಎಲ್ಸಿಯಾಗುವ ಅವಕಾಶ ಕಾಂಗ್ರೆಸ್ ನೀಡಿದೆ. “ಹಾಗಾದರೆ ಅವಕಾಶ ನೀಡೋದು ಒಲೈಕೆಯೇ?” ಎಂದು ಪ್ರಶ್ನಿಸಿದರು.

ಸಮುದಾಯಗಳಲ್ಲಿ ಗುಂಪುಗಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ವೀರಶೈವ, ಒಕ್ಕಲಿಗ ಸೇರಿದಂತೆ ಎಲ್ಲ ಸಮುದಾಯಗಳಲ್ಲೂ ಗುಂಪುಗಳಿರುತ್ತವೆ. ರಾಜಕೀಯದಲ್ಲಿ ಇದು ಸಹಜ” ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಸಮುದಾಯದ ನಾಯಕರ ವಿರುದ್ಧ ಆರೋಪ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಪರ ಇದೆ ಎಂದು ಹೇಳಿದರು.

ಇದೇ ವೇಳೆ ಇಡಿ ದಾಳಿಗಳ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್, ಜಾರಿ ನಿರ್ದೇಶನಾಲಯ ಸ್ವಾಯತ್ತ ಸಂಸ್ಥೆಯಾಗಿದ್ದರೂ, ಬಿಜೆಪಿ ಸರ್ಕಾರ ಅದನ್ನು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಳಸುತ್ತಿದೆ ಎಂಬ ಆರೋಪ ಮಾಡಿದರು.

“ಇಡಿ ದಾಳಿಯ ನಂತರ ಅನೇಕರು ಬಿಜೆಪಿಗೆ ಸೇರ್ಪಡೆಯಾಗಿರುವುದು ಇತಿಹಾಸದಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ದಾಳಿಗಳು ಹೆಚ್ಚಾಗುತ್ತವೆ. ಬಿಜೆಪಿ ಸೇರಿದರೆ ಒಳ್ಳೆಯವರು, ಇಲ್ಲದಿದ್ದರೆ ಇಡಿ ದಾಳಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಟೀಕಿಸಿದರು.

ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಕ್ಕೆ ತಾವು ವಿರೋಧವಿಲ್ಲ. ಆದರೆ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು ಕೇಂದ್ರ ಸಂಸ್ಥೆಗಳನ್ನು ಬಳಸುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande