
ಕೋಲಾರ, ೨೧ ಏಪ್ರಿಲ್ (ಹಿ.ಸ) :
ಆ್ಯಂಕರ್ : ನಗರದ ಶೃಂಗೇರಿ ಶಂಕರ ಮಠದ ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಶಂಕರಜಯAತಿಯ ಭವ್ಯ ರಥೋತ್ಸವ ಕಲಾತಂಡಗಳೊAದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಗರದ ಶೃಂಗೇರಿ ಶಂಕರ ಮಠ ಹಾಗೂ ಶಂಕರಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ೮-೩೦ಕ್ಕೆ ಶಂಕರ ಭಗವಾತ್ಪಾದರ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿದ ಪಲ್ಲಕ್ಕಿಯೊಂದಿಗೆ ಅಲಂಕರಿಸಿದ ರಥದಲ್ಲಿ ಕುಳ್ಳರಿಸಿ ನಗರದ ಮುಖ್ಯಬೀದಿಗಳಲ್ಲಿ ನಗರ ಸಂಕೀರ್ತನೆಯೊ0ದಿಗೆ ಮೆರವಣಿಗೆ ನಡೆಸಲಾಯಿತು.
ವಾದ್ಯ ಮೇಳ, ಕಲಾತಂಡಗಳೊAದಿಗೆ ಮೆರವಣಿಗೆ ಸಾಗಿ ಬಂದಿದ್ದು, ಮಾರ್ಗದುದ್ದಕ್ಕೂ ನೂರಾರು ಮಂದಿಯ ವೇದಘೋಷ, ಶಂಕರರಿಗೆ ಜೈಕಾರ ಘೋಷಣೆಗಳೊಂದಿಗೆ ರಥೋತ್ಸವ ಸಾಗಿ ಬಂತು.
ಮೆರವಣಿಗೆ ನಗರದ ಕಾಲೇಜು ವೃತ್ತ, ಬ್ರಾಹ್ಮಣರ ಬೀದಿ, ದೊಡ್ಡಪೇಟೆ , ಕಾಳಮ್ಮ ಗುಡಿ ರಸ್ತೆ ಮೂಲಕ ರಥ ನಗರದಲ್ಲಿ ಸಂಚರಿಸಿ ಶಂಕರಮಠವನ್ನು ಸೇರಿತು. ನಾದ, ವೇದಘೋಷ, ಭಜನೆ, ತಾಳಗಳೊಂದಿಗೆ ಮೆರವಣಿಗೆಯಲ್ಲಿ ನಗರದ ನೂರಾರು ವಿಪ್ರ ಬಾಂಧವರು ಭಾಗವಹಿಸಿದ್ದು, ಶಂಕರರ ಪಲ್ಲಕ್ಕಿಗೆ ದಾರಿಯುದ್ದಕ್ಕೂ ಜನತೆ ಪೂಜೆ ಸಲ್ಲಿಸಿದರು. ಶೃಂಗೇರಿ ಶಂಕರ ಸೇವಾ ಟ್ರಸ್ಟ್ ಶಂಕರಾಚಾರ್ಯರ ಜಯಂತೋತ್ಸವದ ಉಸ್ತುವಾರಿ ವಹಿಸಿದ್ದು, ಸಮಾಜಕ್ಕೆ ಶಂಕರರ ಕೊಡುಗೆಯನ್ನು ಸ್ಮರಿಸಲಾಯಿತು. ಮಹಿಳಾ ಮಂಡಳಿ ಮತ್ತು ಶಂಕರ ಸೇವಾ ಸಮಿತಿ ಸಹಯೋಗದಲ್ಲಿ ಸಾಮೂಹಿಕ ಶಂಕರ ಸ್ತೋತ್ರ ಗಾಯನ, ಅನ್ನದಾಸೋಹ ಏರ್ಪಡಿಸಲಾಗಿತ್ತು. ರಥೋತ್ಸವದ ನಂತರ ಶಂಕರಮಠದಲ್ಲಿ ನಡೆದ ವೇದ ಪಾರಾಯಣದಲ್ಲಿ ಅನೇಕರು ಮಾತನಾಡಿ, ಶಂಕರರ ತತ್ವಗಳ ಪಾರಾಯಣ ನಡೆಸಿದರು.
ಶಂಕರ ಮಠದಲ್ಲಿ ಶಂಕರ ಜಯಂತಿ ಅಂಗವಾಗಿ ಆಯೋಜಿಸಿದ್ದ ಶಂಕರಾಚಾರ್ಯರು ಹಾಗೂ ಶಾರದಾಮಾತೆಯ ಛದ್ಮವೇಷಧಾರಿ ಸ್ವರ್ಧೆಯಲ್ಲಿ ಅನೇಕ ಮಕ್ಕಳು ವೇಷ ಧರಿಸಿ ಪಾಲ್ಗೊಂಡು ಗಮನ ಸೆಳೆದರು.
ಮೆರವಣಿಗೆಯಲ್ಲಿ ಶಂಕರ ಸೇವಾ ಸಮಿತಿಯ ಅಧ್ಯಕ್ಷ ಡಾ.ಜಯರಾಂ, ಕಾರ್ಯಾಧ್ಯಕ್ಷ ವಿಷ್ಣು, ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ, ಖಜಾಂಚಿ ಮುರಳಿ ಸುಂದರ್,ಅರ್ಚಕರಾದ ಅಪ್ಪಣ್ಣಶಾಸ್ತಿçಗಳು, ಸುರೇಶ್, ಪದಾಧಿಕಾರಿಗಳಾದ ವರುಣ್, ಶಿವಶಂಕರ್, ಉದಯಕುಮಾರ್, ಹಾಬಿ ರಮೇಶ್, ಪಿ.ಚಂದ್ರಪ್ರಕಾಶ್, ರಾಮಕೃಷ್ಣಭಟ್ಟರು, ರುಕ್ಮಿಣಿ ಶ್ರೀಕಂಠನ್, ಬಿಜೆಪಿಯ ಸತ್ಯನಾರಾಯಣರಾವ್, ಸೇರಿದಂತೆ ನಗರ ಹಾಗೂ ತಾಲ್ಲೂಕಿನ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಅನೇಕ ಗುರು ಭಕ್ತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್