
ಕೋಲಾರ, ಏಪ್ರಿಲ್ ೨೧ (ಹಿ.ಸ) :
ಆ್ಯಂಕರ್ : ಜಿಲ್ಲೆಯಲ್ಲಿ ಜನಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತ್ವರಿತಗತವಾಗಿ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಅವರಿಗೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್ ರವಿ ಖಡಕ್ ಎಚ್ಚರಿಕೆ ನೀಡಿದರು.
ಜನಗಣತಿಯ ಮನೆ ಪಟ್ಟಿ ಮತ್ತು ಮನೆ ಗಣತಿಗೆ ಸಂಬAಧಿಸಿದAತೆ ಎಲ್ಲಾ ಚಾರ್ಚ್ ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ನಡೆಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಎಲ್ಲಾ ಗಣತಿದಾರರು ಹಾಗೂ ಮೇಲ್ವಿಚಾರಕರು ತಮಗೆ ಹಂಚಿಕೆಯಾಗಿರುವ ಮನೆಪಟ್ಟಿ ಕಾರ್ಯಾಚರಣೆ (ಹೆಚ್ಎಲ್ಓ) ನಡೆಸುತ್ತಿದ್ದಾರೆ. ಅದಾಗಿಯೂ ಕೋಲಾರ ಜಿಲ್ಲೆಯ ಮನೆ ಪಟ್ಟಿ ಮತ್ತು ಮನೆ ಗಣತಿ ಪ್ರಗತಿ ಕಡಿಮೆಯಾಗಿರುತ್ತದೆ. ಈ ಕುರಿತಾಗಿ ಜಿಲ್ಲೆಯ ಎಲ್ಲಾ ವಿಭಾಗದ ಚಾರ್ಚ್ ಹಾಗೂ ಜನಗಣತಿ ಅಧಿಕಾರಿಗಳು ಈ ಕೂಡಲೇ ಕ್ರಮ ವಹಿಸಿ ಗಣತಿಯನ್ನು ತ್ವರಿತಗತಿಯಲ್ಲಿ ಕೈಗಳ್ಳೊಲು ಸೂಚನೆ ನೀಡಿದರು.
ಜಿಲ್ಲೆಯ ಪ್ರತಿ ಚಾರ್ಚ್ ಕಚೇರಿಯಲ್ಲಿನ ಜನಗಣತಿ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮಾಲೂರು (ಗ್ರಾಮೀಣ), ಬಂಗಾರಪೇಟೆ (ಗ್ರಾಮೀಣ), ಶ್ರೀನಿವಾಸಪುರ (ಗ್ರಾಮೀಣ), ಕೆ.ಜಿ.ಎಫ್ (ಗ್ರಾಮೀಣ) ಮುಂತಾದ ಕಡೆಯಲ್ಲಿ ಎನುಮರೇಟರ್ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದು ಹೇಗೇ ಮುಂದುವರೆದರು ಗಣತಿಗೆ ನಿಯೋಜಿಸಲ್ಪಟ್ಟ ಎಲ್ಲಾ ಚಾರ್ಚ್ ಹಾಗೂ ನೋಡಲ್ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದೆಂದು ತಿಳಿಸಿದರು. ಅಲ್ಲದೆ ಗ್ರಾಮ ಲೆಕ್ಕಿಗರು ಹಾಗೂ ಇನ್ನಿತರ ನೌಕರರನ್ನು ಗಣತಿಗೆ ಹೆಚ್ಚುವರಿಯಾಗಿ ನಿಯೋಜಿಸಬಾರದು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಇವರು ಇನ್ನಿತರ ಕೆಲಸಗಳನ್ನು ತೊಡಗಬೇಕಾಗುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಎಸ್.ಎಂ. ಮಂಗಳ ಸೇರಿದಂತೆ ಗಣತಿಯ ಎಲ್ಲಾ ಚಾರ್ಚ್ ಹಾಗೂ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್