
ಕೋಲಾರ, ೨೧ ಏಪ್ರಿಲ್ (ಹಿ.ಸ) :
ಆ್ಯಂಕರ್ : ಬಸವ ತತ್ವಗಳ ಚರ್ಚೆಯ ಮೂಲಕ ಜಾತಿಮತಬೇಧವಿಲ್ಲದ ಸಮಾಜ ನಿರ್ಮಾಣದ ಪ್ರಯತ್ನವಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸುವರ್ಣ ಗಂಗಾ ಕ್ಯಾಂಪಾಸ್ನಲ್ಲಿ ಅನುಭವ ಮಂಟಪದ ಉದ್ಘಾಟನೆ ನಡೆಸಿರುವುದು ಶ್ಲಾಘನೀಯ ಕಾರ್ಯ ಎಂದು ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.
ನಗರ ಹೊರವಲಯದ ಮಂಗಸAದ್ರದ ಸುವರ್ಣಗಂಗಾ ಕ್ಯಾಂಪಾಸ್ನಲ್ಲಿ ಬೆಂಗಳೂರು ಉತ್ತರ ವಿವಿಯಿಂದ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಅನುಭವ ಮಂಟಪದಲ್ಲಿ ಬಸವ ತತ್ವಗಳ ಚರ್ಚೆ ನಡೆಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗಬೇಕು, ಬಸವಣ್ಣನವರ ಸ್ಮರಣೆ ಜತೆಗೆ ಜಾತಿ, ಧರ್ಮ, ಕುಲ,ಮತಬೇಧವಿಲ್ಲದ ಮನಸ್ಥಿತಿ ಬಲಗೊಳ್ಳಬೇಕು. ದೇಹ,ಮನಸ್ಸು, ಆತ್ಮದ ನಡುವಿನ ಸೂಕ್ಷö್ಮ ತತ್ವಗಳನ್ನು ಅರಿತುಕೊಲ್ಳಬೇಕು, ಬಸವಣ್ಣನವರು ಹೇಳಿದಂತೆ ನಾವು ದೇವರನ್ನು ದೇವಾಲಯ, ಚರ್ಚ್,ಮಸೀದಿಗಳಲ್ಲಿ ಹುಡುಕುವ ಅಗತ್ಯವಿಲ್ಲ, ನಮ್ಮನ್ನು ನಾವೇ ಅರಿತರೆ ಅದೇ ದೈವತ್ವ. ದಮನಿತರ ಧ್ವನಿಯಾಗಿದ್ದ ಬಸವಣ್ಣನವರ ಅನುಭವ ಮಂಟಪದ ಈ ವೇದಿಕೆ ದೇಶದ ಗಮನ ಸೆಳೆಯಬೇಕು, ವಿದ್ಯಾರ್ಥಿಗಳು ವ್ಯಕ್ತಗತವಾಗಿ ತಮ್ಮ ಧ್ವನಿ ಏನು ಎಂಬುದನ್ನು ಅರಿಯಬೇಕು, ಅಸ್ಪೃಶ್ಯತೆಗೆ ತಿಲಾಂಜಲಿ ಇಡಬೇಕು, ಸ್ತಿçà ಸಮಾನತೆಗೆ ಒತ್ತು ನೀಡಬೇಕು ಎಂದರು.
ವಿಶ್ವವಿದ್ಯಾಲಯದಲ್ಲಿ ಬಸವ ಬೀಜವನ್ನು ಭಿತ್ತಿದ್ದೀರಿ, ಇದು ನಿಮ್ಮ ಬದಲಾವಣೆಯ ಮಾರ್ಗ, ನಿಮ್ಮೊಳಗಿನ ಆತ್ಮ ಚೈತನ್ಯವನ್ನು ಅರಿವಾಗಿಟ್ಟುಕೊಂಡು ಬದುಕು ಸಾಗಿಸಿ ಎಂದರು.
ಬೆAಗಳೂರು ಉತ್ತರ ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಕೊಟ್ಟಿರುವ ಸಂದೇಶದ ಬುನಾದಿಯ ಮೇಲೆ ಸಮ ಸಮಾಜದ ತಳಹದಿಯ ಬುನಾದಿ ಹಾಕಿಕೊಟ್ಟವರು, ಜನಸಾಮಾನ್ಯರಿಗೆ ಸಂದೇಶಗಳನ್ನು ವಚನಗಳ ಮೂಲಕ ತಲುಪಿಸಿದರು. ಬಸವಣ್ಣನವರ ವಚನಗಳಾದ ಉಳ್ಳವರು ಶಿವಾಲಯ ಮಾಡುವರು, ಮತ್ತು ಕಾಯಕವೇ ಕೈಲಾಸ ಮತ್ತಿತರ ತತ್ವಗಳ ಮಹತ್ವ ಸಮಾಜಕ್ಕೆ ಬೆಳಕು ನೀಡಿದೆ ಎಂದ ಅವರು, ಬಸವಣ್ಣನವರು ಸಾಮಾನಿಕ, ಆರ್ಥಿಕ,ರಾಜಕೀಯ ಬದಲಾವಣೆಗೆ ಅಡಿಪಾಯ ಹಾಕಿಕೊಟ್ಟ ಮಹಾಪುರುಷರು. ಅನುಭವ ಮಂಟಪ ವೇದಿಕೆಯನ್ನು ಬಳಸಿಕೊಂಡು ಚರ್ಚೆಗಳ ಮೂಲಕ ಬಸವ ತತ್ವಗಳ ಮಹತ್ವ ಅರಿತು ಸಮ ಸಮಾಜದ ನಿರ್ಮಾಣಕ್ಕೆ ನೆರವಾಗಬೇಕು, ನಮ್ಮ ನಡುವಿನ ದ್ವೇಷ,ಅಸೂಯೆ ಕೊನೆಗೊಳ್ಳಬೇಕು, ಉಪನ್ಯಾಸಕರು,ವಿದ್ಯಾರ್ಥಿಗಳ ನಡುವೆ ಚರ್ಚೆಯ ವಿಷಯಗಳ ವಿನಿಯಮವಾಗಬೇಕು ಒಟ್ಟಾರೆ ಜ್ಞಾನಾರ್ಜನೆಗೆ ಈ ವೇದಿಕೆ ಬಳಕೆಯಾಗಲಿ ಎಂದರು.
ಅರವಿAದ ಜತ್ತಿಯವರ ಬಸವ ತತ್ವಗಳ ಪ್ರಚಾರಕ್ಕೆ ನಡೆಸಿರುವ ಪ್ರಾಮಾಣಿಕ ಪ್ರಯತ್ನದ ಕುರಿತು ಕುಲಪತಿಗಳು ಶ್ಲಾಘಿಸಿ, ಅವರ ಪ್ರಯತ್ನ ಸಮ ಸಮಾಜಕ್ಕೆ ಕಾರಣವಾಗಲಿ ಎಂದರು.
ಉತ್ತರ ವಿವಿಯ ಮೌಲ್ಯಮಾಪನ ಕುಲಸಚಿವ ಲೋಕನಾಥ್, ಅರವಿಂದ ಜತ್ತಿಯವರ ಸರಳ,ಸಜ್ಜನಿಕೆ ಮತ್ತು ಉತ್ಸಾಹ,ಚೈತನ್ಯ ಚಿಲುಮೆಗೆ ಅವರ ಬಸವತತ್ವ ಪಾಲನೆ ಮತ್ತು ಅಂತರAಗ,ಬಹಿರAಗ ಶುದ್ದಿಯೇ ಕಾರಣ. ೬ನೇ ಶತಮಾನದಲ್ಲಿ ಬುದ್ದನ ಶಾಂತಿ ಮಂತ್ರ, ಅದೇ ದಾರಿಯಲ್ಲಿ ೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ಪದ್ದತಿ ವಿರುದ್ದ ಧ್ವನಿಯೆತ್ತುವ ಮೂಲಕ ಪಂಚಭೂತಗಳು ಯಾರ ಸ್ವತ್ತಲ್ಲ ಎಂದು ಪ್ರತಿಪಾದಿಸಿದರು ಎಂದರು.
ಉತ್ತರ ವಿವಿ ವಿತ್ತಾಧಿಕಾರಿ ವಸಂತಕುಮಾರ್ ಮಾತನಾಡಿ, ಅರವಿಂದ ಜತ್ತಿಯವರು ಬಸವಣ್ಣನವರ ತತ್ವಗಳ ಪ್ರಚಾರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ, ಅವರ ಪ್ರಯತ್ನದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತಿದೆ ಎಂದರು.
ಸಿAಡಿಕೇಟ್ ಸದಸ್ಯ ಗೋಪಾಲಗೌಡ ಮಾತನಾಡಿ, ಕೋಲಾರದ ಮಣ್ಣು ದೇಶಕ್ಕೆ ಮಹಾನ್ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರವನ್ನು ಆಯ್ಕೆಮಾಡಿಕೊಮಡರು ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಬಸವಣ್ಣ,ಬುದ್ದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ಕುಲಸಚಿವ ಸಿ.ಎನ್.ಶ್ರೀಧರ್, ಮಂಗಸAದ್ರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಕುಮುದಾ, ಪಿ.ಎಂ.ಉಷಾ ನೋಡಲ್ ಅಧಿಕಾರಿ ರಮೇಶ್, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ರಾಜಶೇಖರ್,ಲೋಕೇಶ್, ಬಸವರಾಜ್,ರಾಮಚಂದ್ರಪ್ಪ, ಮುನಿಶಾಮಿಗೌಡ ಮತ್ತಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್