

ಬಳ್ಳಾರಿ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಬಳ್ಳಾರಿಯಲ್ಲಿ ನಡೆದಿದ್ದು ಅಧ್ಯಕ್ಷರಾಗಿ ಎಂ. ಗಿರಿಜಾಪತಿ, ಪ್ರಧಾನ ಕಾರ್ಯದರ್ಶಿಗಳಾಗಿ ಜಿ. ದೊಡ್ಡಬಸಪ್ಪ ಅವರು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಎಚ್.ಎಂ. ತಿಪ್ಪೇಸ್ವಾಮಿ, ಕೆ. ಯಲ್ಲಪ್ಪ, ಡಿ.ಹೆಚ್. ವೆಂಕಟೇಶ್, ಉಪಾಧ್ಯಕ್ಷರಾಗಿ
ಶ್ರೀಮತಿ ಎಂ.ಹೇಮಲತಾ, ಬಿ. ಇರಾಳಪ್ಪ, ಹೆಚ್. ವೈ. ಶೇಷಾದ್ರಿ, ಎಸ್. ಗುರುರಾಜಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಜಿ.ಎಸ್. ಹನುಮಂತಪ್ಪ, ಪಿ. ಸೋಮಶೇಖರ್, ವೈ. ವೆಂಕಟೇಶ್, ಕೆ. ಜಂಬುನಾಥ್ ಮತ್ತು ಕೋಶಾಧಿಕಾರಿಗಳಾಗಿ ಮಾನ್ವಿ ಹನುಮಂತಪ್ಪ ಹಾಗೂ ಸಹಕೋಶಾಧಿಕಾರಿಗಳಾಗಿ ಗಂಜಿ ತಿಪ್ಪೇಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಗಂಗಾಧರ, ಕೆ. ಶರಣಪ್ಪ, ಎಂ. ಸಿದ್ದಪ್ಪ, ಸಮೂಹ ಮಾಧ್ಯಮ ಕಾರ್ಯದರ್ಶಿಗಳಾಗಿ ಗಂಜಿ ಪಂಪಾಪತಿ, ಎನ್.ಎಂ. ಚೆನ್ನಬಸವ, ಕೆ.ಆರ್. ನಾಗರಾಜಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ವಿವರಗಳಿಗಾಗಿ : ಎಂ. ಗಿರಿಜಾಪತಿ, ಕನ್ನಡ ಶಿಕ್ಷಕರು, ಮೊಬೈಲ್ : 94497 43209 ಗೆ ಸಂಪರ್ಕ ಮಾಡಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್