ನಾನು ಇನ್ನೂ ಬಿಜೆಪಿಯಲ್ಲೇ : ಬಸನಗೌಡ ಪಾಟೀಲ್ ಯತ್ನಾಳ
ಬಾಗಲಕೋಟೆ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಎಂ.ಬಿ. ಪಾಟೀಲ್ ಹೇಳಿಕೆಗೆ ತಿರುಗೇಟು; “ಸ್ವಾಭಿಮಾನ ಇದ್ದರೆ ವಿಜಯಪುರದಲ್ಲಿ ಮಂತ್ರಿಯನ್ನು ಸೋಲಿಸಲಿ” ಎಂದು ಸವಾಲು. ಹೌದು ಹೀಗೆ ಸವಾಲು ಹಾಕಿದ್ದು ಬೇರೆ ಯಾರೂ ಅಲ್ಲ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಬಾಗಲಕೋಟೆ ಉಪಚುನಾವಣೆಯ ಹಿನ್ನ
ನಾನು ಇನ್ನೂ ಬಿಜೆಪಿಯಲ್ಲೇ : ಬಸನಗೌಡ ಪಾಟೀಲ್ ಯತ್ನಾಳ


ಬಾಗಲಕೋಟೆ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಎಂ.ಬಿ. ಪಾಟೀಲ್ ಹೇಳಿಕೆಗೆ ತಿರುಗೇಟು; “ಸ್ವಾಭಿಮಾನ ಇದ್ದರೆ ವಿಜಯಪುರದಲ್ಲಿ ಮಂತ್ರಿಯನ್ನು ಸೋಲಿಸಲಿ” ಎಂದು ಸವಾಲು.

ಹೌದು ಹೀಗೆ ಸವಾಲು ಹಾಕಿದ್ದು ಬೇರೆ ಯಾರೂ ಅಲ್ಲ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಮಾತನಾಡಿದ ಶಾಸಕ ಯತ್ನಾಳ್, ಮಹತ್ವದ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ನಾನು ಒಬ್ಬಂಟಿಗನಲ್ಲ. ಇಡೀ ಭಾರತೀಯ ಜನತಾ ಪಕ್ಷದ ಪರಿವಾರ ಹಾಗೂ ಹಿಂದೂ ಪರಿವಾರ ನನ್ನೊಂದಿಗಿದೆ ಎಂದು ಅವರು ಹೇಳಿದರು. ನನ್ನನ್ನು ಪಕ್ಷದಿಂದ ಹೊರಗೆ ಹಾಕಿರುವುದು ಕೇವಲ ತಾಂತ್ರಿಕ ವಿಷಯ ಮಾತ್ರ, ನಾನು ಇನ್ನೂ ಬಿಜೆಪಿಯಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಸಚಿವ ಎಂ ಬಿ ಪಾಟೀಲ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್, ಸ್ವಾಭಿಮಾನ ಹಾಗೂ ಮಾನ ಮರ್ಯಾದೆ ಇದ್ದರೆ ವಿಜಯಪುರ ಜಿಲ್ಲೆಯಲ್ಲಿ ನಿಮ್ಮ ಒಬ್ಬ ಮಂತ್ರಿಯನ್ನು ಸೋಲಿಸುವ ಪ್ರಯತ್ನ ಮಾಡಲಿ ಎಂದು ಸಚಿವರ ಹೆಸರು ಹೇಳದೇ ಸವಾಲು ಹಾಕಿದರು.

ಇದೇ ಸಂದರ್ಭದಲ್ಲಿ ಪರೋಕ್ಷವಾಗಿ ಸಚಿವ ಶಿವಾನಂದ ಪಾಟೀಲ್ ಅವರನ್ನು ಸೋಲಿಸಲು ಎಂ.ಬಿ. ಪಾಟೀಲ್ ಮುಂದಾಗಲಿ ಎಂದು ಯತ್ನಾಳ್ ಟೀಕಿಸಿದರು.

ಯತ್ನಾಳ್ ಅವರ ಈ ಹೇಳಿಕೆಗಳು ಬಾಗಲಕೋಟೆ ಉಪಚುನಾವಣೆಯ ರಾಜಕೀಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಿರುವುದು ಗಮನಾರ್ಹವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande