ಏ.6 ರಂದು ಕೊಪ್ಪಳದಲ್ಲಿ ನೇರ ಸಂದರ್ಶನ
ಕೊಪ್ಪಳ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏಪ್ರಿಲ್ 6 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ನೇರ ಇನ್ ಸಂದರ್ಶನವನ್ನು ಆಯೋಜಿಸಲಾಗಿದೆ. ಹೊಸಪೇಟ್ ಸ್ಟೀಲ್ ಲಿಮಿಟೆಡ್ ಸಂಸ್ಥೆಯು ತಮ್ಮಲ್ಲಿ ಖಾಲಿ ಇರುವ ಹೆಲ್ಪರ್
ಏ.6 ರಂದು ಕೊಪ್ಪಳದಲ್ಲಿ ನೇರ ಸಂದರ್ಶನ


ಕೊಪ್ಪಳ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏಪ್ರಿಲ್ 6 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ನೇರ ಇನ್ ಸಂದರ್ಶನವನ್ನು ಆಯೋಜಿಸಲಾಗಿದೆ.

ಹೊಸಪೇಟ್ ಸ್ಟೀಲ್ ಲಿಮಿಟೆಡ್ ಸಂಸ್ಥೆಯು ತಮ್ಮಲ್ಲಿ ಖಾಲಿ ಇರುವ ಹೆಲ್ಪರ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುವುದು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪಾಸ್/ಫೇಲ್ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತ 18 ರಿಂದ 30 ವರ್ಷದೊಳಗಿನ ನಿರುದ್ಯೋಗಿ ಪುರಷರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 2 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಸುಮೆ) ಹಾಗೂ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್ವ್ಯೂವ್ ನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.

ಉದ್ಯೋಕಾಂಕ್ಷಿಗಳು https://forms.gle/A3GWAYfMgkGWj9KM8 ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande