ಈನೆಲ ಈಜಲ ಸಾಂಸ್ಕೃತಿಕ ಸಂಘಟನೆ ಬೇಸಿಗೆ ಶಿಬಿರ
ಈನೆಲ ಈಜಲ ಸಾಂಸ್ಕೃತಿಕ ಸಂಘಟನೆಯಿAದ ಬೇಸಿಗೆ ಶಿಬಿರ
ಈನೆಲ ಈಜಲ ಸಾಂಸ್ಕೃತಿಕ ಸಂಘಟನೆ ಬೇಸಿಗೆ ಶಿಬಿರ


ಕೋಲಾರ, ೦೨ (ಹಿ.ಸ) :

ಆ್ಯಂಕರ್ : ಕೋಲಾರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸದಾಶಯದೊಂದಿಗೆ 'ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ' ಕೋಲಾರ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಸೃಜನಾತ್ಮಕ ಕಲಿಕಾ ಹಬ್ಬವು ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏಪ್ರಿಲ್ ೧೬ ರಿಂದ ೩೦ರವರೆಗೆ ನಡೆಯಲಿದೆ.

ಶಿಬಿರದಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ಆಸಕ್ತ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದ್ದು, ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಶಿಬಿರಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಜೊತೆಗೆ ಸಾಮಾಜಿಕ ನಾಟಕ, ಜಾನಪದ ಗಾಯನ, ಜನಪದ ನೃತ್ಯ, ಸಾಂಪ್ರದಾಯಿಕ ಕೋಲಾಟ, ಪೇಪರ್ ಕ್ರಾಫ್ಟ್ ಹಾಗೂ ಮಣ್ಣಿನ ಬೊಂಬೆ ತಯಾರಿಕೆಯಂತಹ ವಿಶಿಷ್ಟ ಕಲೆಗಳನ್ನು ಕಲಿಸಲಾಗುವುದು.

ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ನಕಲನ್ನು ಏಪ್ರಿಲ್ ೧೫ರ ಒಳಗಾಗಿ ಸಲ್ಲಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ಜನಪದ ಗಾಯಕ ಬಿ. ವೆಂಕಟಾಚಲಪತಿ (ಮೊ: ೯೦೦೮೭೪೩೨೫೬) ಅಥವಾ ಶಿಬಿರದ ಸಂಚಾಲಕ ಕುಡುವನಹಳ್ಳಿ ಗಣೇಶ್ (ಮೊ: ೯೪೪೯೪೦೪೮೭೩) ಅವರನ್ನು ಸಂಪರ್ಕಿಸಬಹುದಾಗಿದೆ. ನಿಮ್ಮ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande