
ಬಾಗಲಕೋಟೆ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಡಗಲಿ ಗ್ರಾಮದಲ್ಲಿ ನಡೆದ ರುದ್ರಮುನಿ ಶಿವಯೋಗಿಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ನೂರಾರು ಮಹಿಳೆಯರು ಭಕ್ತಿಭಾವದಿಂದ ರೊಟ್ಟಿ ಬುತ್ತಿ ಹೊತ್ತು ರುದ್ರಸ್ವಾಮಿ ಮಠದತ್ತ ಪಾದಯಾತ್ರೆ ನಡೆಸಿದರು.
ಜಾತ್ರಾ ಮಹೋತ್ಸವದ ಭಾಗವಾಗಿ ಮಹಿಳೆಯರು “ಹರ್ ಹರ್ ಮಹಾದೇವ್” ಎಂಬ ಘೋಷಣೆಗಳನ್ನು ಹಾಕುತ್ತ ಸರತಿ ಸಾಲಿನಲ್ಲಿ ಸಾಗಿದರು. ಬಿರು ಬಿಸಿಲಿನನ್ನೂ ಲೆಕ್ಕಿಸದೇ ಶಿವಯೋಗಿಶ್ವರರ ನಾ ಮಸ್ಮರಣೆ ಮಾಡುತ್ತಾ ಭಕ್ತಿಭಾವದಿಂದ ದೇವಸ್ಥಾನದ ಕಡೆಗೆ ನಡೆದು ಬಂದರು.
ಗ್ರಾಮದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ರುದ್ರಮುನಿ ಶಿವಯೋಗಿಶ್ವರರ ಆಶೀರ್ವಾದ ಪಡೆಯಲು ಭಕ್ತರ ದೊಡ್ಡ ಸಂಖ್ಯೆಯ ಜನಸಾಗರ ಹರಿದು ಬಂದಿತ್ತು.
ಹಿಂದೂಸ್ತಾನ್ ಸಮಾಚಾರ್ / jyothi deshpande