
ಕೋಲಾರ, ೦೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ಜಿಲ್ಲಾದ್ಯಂತ ೬೫ ಕೇಂದ್ರಗಳಲ್ಲಿ ಗುರುವಾರ ನಡೆದ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯೊಂದಿಗೆ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಮುಕ್ತಾಯವಾಯಿತು. ಇದಕ್ಕೆ ಸಹಕಾರ ನೀಡಿದ ಜಿಲ್ಲಾಡಳಿತ,ಜಿಪಂ,ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪೋಷಕರು, ಶಿಕ್ಷಕರು,ವಿದ್ಯಾರ್ಥಿಗಳಿಗೆ ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮುಕ್ತಾಯಗೊಂಡಿದೆ, ಇನ್ನು ಮೌಲ್ಯಮಾಪನ ಬಾಕಿ ಇದ್ದು, ಎಲ್ಲಿಯೂ ಗೊಂದಲ,ಸಮಸ್ಯೆಗಳಿಗೆ ಅವಕಾಶವಾಗಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ,ಎಸ್ಪಿ ಕನ್ನಿಕಾ ಸಕ್ರಿವಾಲ್, ಜಿಪಂ ಸಿಇಒ ಪ್ರವೀಣ್ ಬಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ನೀಡಿದ ಮಾರ್ಗದರ್ಶನ, ಇಲಾಖೆಗಳ ಪೂರ್ಣ ಸಹಕಾರ, ಆರೋಗ್ಯ ಇಲಾಖೆ, ರಕ್ಷಣೆ ನೀಡಿದ ಪೊಲೀಸ್ ಇಲಾಖೆ, ನಗರಸಭೆ, ಗ್ರಾಮ ಪಂಚಾಯಿತಿ, ಮುಖ್ಯ ಅಧೀಕ್ಷಕರು,ಕಸ್ಟೋಡಿಯನ್ಸ್, ಶಿಕ್ಷಕರು, ಜಾಗೃತದಳ ಸಿಬ್ಬಂದಿ, ಶಿಕ್ಷಣ ಇಲಾಖೆ ಅಧಿಕಾರಿ,ಸಿಬ್ಬಂದಿ, ಪೋಷಕರು, ಮಾಧ್ಯಮ ಬಂಧುಗಳು, ವಿದ್ಯಾರ್ಥಿಗಳಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆ ದಿನವಾದ ಗುರುವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಯೂ ಗೊಂದಲಗಳಿಗೆ ಅವಕಾಶವಿಲ್ಲದೇ ಸುಗಮವಾಗಿ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ ೧೮೮೯೭ ಮಂದಿ ಪೈಕಿ ಮಂದಿ ೧೮೬೮೨ ಮಂದಿ ಹಾಜರಾಗಿದ್ದರು. ಇಂದು ಒಟ್ಟು ೨೧೫ ಮಂದಿ ಗೈರಾಗಿದ್ದು, ಶೇ.೯೮.೮೬ ಹಾಜರಿ ಇತ್ತು ಎಂದು ಡಿಡಿಪಿಐ ಅಲ್ಮಾಸ್ ಫರ್ವೀನ್ತಾಜ್ ತಿಳಿಸಿದ್ದಾರೆ.
ಕೋಲಾರದ ಅಂಜುಮಾನ್ ಪ್ರೌಢಶಾಲೆ ಕೇಂದ್ರದಲ್ಲಿ ಪರೀಕ್ಷೆ ಅತ್ಯಂತ ಸುಗಮವಾಗಿ ನಡೆದಿದ್ದು, ಇಲ್ಲಿ ಮುಖ್ಯ ಅಧೀಕ್ಷಕರಾಗಿ ಸುಭಾಷ್ ಶಾಲೆ ಮುಖ್ಯ ಶಿಕ್ಷಕ ವೇಣುಗೋಪಾಲ್, ಕಸ್ಟೋಡಿಯನ್ ಆಗಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಮಂಜುಳಾ, ಸ್ಥಾನಿಕ ಜಾಗೃತದಳವಾಗಿ ಕೆ.ಗಣೇಶಯ್ಯ ಕಾರ್ಯ ನಿರ್ವಹಿಸಿದರು. ಬಂಗಾರಪೇಟೆ ತಾಲ್ಲೂಕಿನ ೮ ಕೇಂದ್ರಗಳಲ್ಲಿ ಸಮಜ ವಿಜ್ಞಾನ ವಿಷಯಕ್ಕೆ ೨೫೦೧ ಮಂದಿ ನೊಂದಾಯಿಸಿದ್ದು, ೨೪೮೦ ಮಂದಿ ಹಾಜರಾಗಿ ೨೧ ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ ೯ ಕೇಂದ್ರಗಳಲ್ಲಿ ೩೨೫೪ ಮಕ್ಕಳು ಹೆಸರು ನೊಂದಾಯಿಸಿದ್ದು, ೩೨೧೬ ಮಂದಿ ಹಾಜರಾಗಿ ೩೮ ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನ ೧೮ ಕೇಂದ್ರಗಳಲ್ಲಿ ೪೮೦೬ ಮಂದಿ ಹೆಸರು ನೊಂದಾಯಿಸಿದ್ದು, ೪೭೬೧ ಮಂದಿ ಹಾಜರಾಗಿ ಕೇವಲ ೪೫ ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ ೮ ಕೇಂದ್ರಗಳಲ್ಲಿ ೨೯೬೩ ಮಂದಿ ಹೆಸರು ನೊಂದಾಯಿಸಿದ್ದು, ೨೯೨೮ ಮಂದಿ ಹಾಜರಾಗಿದ್ದು, ೩೫ ಮಂದಿ ಗೈರಾಗಿದ್ದಾರೆ. ಮುಳಬಾಗಿಲು ತಾಲ್ಲೂಕಿನ ೧೨ ಕೇಂದ್ರಗಳಲ್ಲಿ ೨೮೧೭ ಮಂದಿ ನೊಂದಾಯಿಸಿದ್ದು, ೨೭೬೨ ಮಂದಿ ಹಾಜರಾಗಿದ್ದು, ೫೫ ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ ೧೦ ಕೇಂದ್ರಗಳಲ್ಲಿ ೨೫೫೬ ಮಂದಿ ಹೆಸರು ನೊಂದಾಯಿಸಿದ್ದು, ೨೫೩೫ ಮಂದಿ ಹಾಜರಾಗಿದ್ದು, ೨೧ಮಂದಿ ಗೈರಾಗಿದ್ದಾರೆ.
ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆ ದಿನವಾಗಿದ್ದು, ಪರೀಕ್ಷೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ನಿರಾಳವಾದರು.
ಅಲಮಿನ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕ ವೇಣುಗೋಪಾಲ್, ಪ್ರಶ್ನೆಪತ್ರಿಕೆ ಅಭಿರಕ್ಷಕಿ ಸಿದ್ದೇಶ್ವರಿ, ಸ್ಥಾನಿಕ ಜಾಗೃತದಳದ ಕೆ.ಗಣೇಶಯ್ಯ, ಮೊಬೈಲ್ ಸ್ವಾಧೀನಾಧಿಕಾರಿ ಸಿಆರ್ಪಿ ಮೀನಾ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಕೆ.ಬಿ.ಶಿವಶಂಕರರೆಡ್ಡಿ, ತಯಿಬಖಾನಂ, ಉಷಾರಾಣಿ, ಶ್ರೀನಿವಾಸಲು, ವಾಣಿಶ್ರೀ, ಶಿಲ್ಪಶ್ರೀ,ರೇಣುಕಾಲಕ್ಷಿö್ಮ, ಸವಿತ, ಫರೀದಾ ವಖಾನಂ, ಪುಷ್ಪ ಬಿ, ಯಾಸ್ಮೀನ್, ನಂಜುAಡಪ್ಪ, ರಮೇಶ್, ಮಂಜುನಾಥ್, ಜರೀನ್ ತಾಜ್, ಹರಿನಾಥ್ ಮತ್ತಿತರರಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೇ ಪರೀಕ್ಷೆ ಯಶಸ್ವಿಯಾಗಿ ಮುಗಿದಿದ್ದಕ್ಕಾಗಿ ಮಕ್ಕಳೊಂದಿಗೆ ಖುಷಿ ಹಂಚಿಕೊ0ಡರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್