ಕೊಪ್ಪಳ - ಆಶ್ರಯ ಫಲಾನುಭವಿಗಳಿಗೆ ಸೂಚನೆ
ಕೊಪ್ಪಳ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆ ಹಾಗೂ ಹೂವಿನಾಳ ರಸ್ತೆಯಲ್ಲಿರುವ ವಿವಿಧ ಸರ್ವೇ ನಂಬರ್ಗಳಲ್ಲಿರುವ ಆಶ್ರಯ ನಿವೇಶನ/ಮನೆಗಳಿಗೆ ಸಂಬಂಧಿಸಿದಂತೆ ಮನೆ ನಿರ್ಮಾಣ ಮಾಡಿಕೊಡುವ ವಿಷಯಕ್ಕೆ ಫಲಾನುಭವಿಗಳು ಹಕ್ಕುಪತ್ರದ ಜರಾಕ್ಸ್ ಪ್ರತಿಯನ್ನು ನಗರಸಭೆ ಕಾರ್ಯಾಲ
ಕೊಪ್ಪಳ - ಆಶ್ರಯ ಫಲಾನುಭವಿಗಳಿಗೆ ಸೂಚನೆ


ಕೊಪ್ಪಳ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆ ಹಾಗೂ ಹೂವಿನಾಳ ರಸ್ತೆಯಲ್ಲಿರುವ ವಿವಿಧ ಸರ್ವೇ ನಂಬರ್ಗಳಲ್ಲಿರುವ ಆಶ್ರಯ ನಿವೇಶನ/ಮನೆಗಳಿಗೆ ಸಂಬಂಧಿಸಿದಂತೆ ಮನೆ ನಿರ್ಮಾಣ ಮಾಡಿಕೊಡುವ ವಿಷಯಕ್ಕೆ ಫಲಾನುಭವಿಗಳು ಹಕ್ಕುಪತ್ರದ ಜರಾಕ್ಸ್ ಪ್ರತಿಯನ್ನು ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಲು ಸೂಚಿಸಿದೆ.

ಹಿರೇಸಿಂದೋಗಿ ರಸ್ತೆಯಲ್ಲಿರುವ ಸರ್ವೆ ನಂ. 591/2, 592/2, 592/3, 592/4, 592/6, 592/7, 592/8, 599/1, 599/2, 591/3, 591/4, 591/5, 591/6, 591/7, 591/8 ಹಾಗೂ ಹೂವಿನಾಳ ರಸ್ತೆಯಲ್ಲಿರುವ ಸರ್ವೆ ನಂಬರ್ 1/2,4,5, 130/0, 130/1, 130/2 16 ಈ ಸರ್ವೆ ನಂಬರ್ಗಳಲ್ಲಿರುವ ಆಶ್ರಯ ನಿವೇಶನಗಳನ್ನು ಅಥವಾ ಮನೆಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ, ಆಯ್ಕೆಯಾದ ನಂತರ ರೂ.30,000 ವಂತಿಕೆ ಹಣವನ್ನು ಭರಣ ಮಾಡಿದ ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿರುತ್ತದೆ.

ಆದರೆ ಈ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ವಿಷಯಕ್ಕೆ ಸಂಬಂಧಪಟ್ಟಂತೆ ನಿವೇಶನಗಳನ್ನು ಪಡೆದುಕೊಂಡಿರುವ ಅರ್ಜಿದಾರರು ಹಕ್ಕುಪತ್ರದ ಜರಾಕ್ಸ್ ಪ್ರತಿಯೊಂದಿಗೆ ಕೊಪ್ಪಳ ನಗರಸಭೆಯ ಆಶ್ರಯ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande