
ನವದೆಹಲಿ, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಏಪ್ರಿಲ್ 19 ಮತ್ತು 20ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ. ಇದು ಶ್ರೀಲಂಕಾಗೆ ಉಪರಾಷ್ಟ್ರಪತಿಯವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಉಪರಾಷ್ಟ್ರಪತಿಗಳು ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ್ ದಿಸಾನಾಯಕೆ ಮತ್ತು ಪ್ರಧಾನಿ ಡಾ. ಹರಿಣಿ ಅಮರಸೂರಿಯಾ ಸೇರಿದಂತೆ ಇತರ ಗಣ್ಯರನ್ನು ಮತ್ತು ಭಾರತೀಯ ವಲಸಿಗರ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಉಭಯ ದೇಶಗಳ ನಡುವಿನ ಇತ್ತೀಚಿನ ಉನ್ನತ ಮಟ್ಟದ ಸಭೆಗಳ ನಂತರ ಉಪರಾಷ್ಟ್ರಪತಿಗಳ ಶ್ರೀಲಂಕಾ ಭೇಟಿಯು ಭಾರತ ಮತ್ತು ಶ್ರೀಲಂಕಾವನ್ನು ಬೆಸೆಯುವ ಶತಮಾನಗಳಷ್ಟು ಹಳೆಯದಾದ ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa