ನಾರಿ ಶಕ್ತಿ ಬಲಿಷ್ಠ ಭಾರತದ ಗುರುತು : ಪ್ರಧಾನಿ ಮೋದಿ
ನವದೆಹಲಿ, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ತಾಯಂದಿರು, ಸಹೋದರಿಯರು ಹಾಗೂ ಪುತ್ರಿಯರ ಕೊಡುಗೆಯನ್ನು ಸ್ಮರಿಸಿ, “ನಾರಿ ಶಕ್ತಿ ಬಲಿಷ್ಠ ಭಾರತದ ಗುರುತು” ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, “ನಮ್ಮ ನಾರಿ
Pm msg


ನವದೆಹಲಿ, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ತಾಯಂದಿರು, ಸಹೋದರಿಯರು ಹಾಗೂ ಪುತ್ರಿಯರ ಕೊಡುಗೆಯನ್ನು ಸ್ಮರಿಸಿ, “ನಾರಿ ಶಕ್ತಿ ಬಲಿಷ್ಠ ಭಾರತದ ಗುರುತು” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, “ನಮ್ಮ ನಾರಿ ಶಕ್ತಿ ಬಲವಾದ ಭಾರತದ ಗುರುತಾಗಿದೆ. ಇಂದು ದೇಶದ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರು ತಮ್ಮ ಅಚಲ ಸಂಕಲ್ಪ, ಭಕ್ತಿ ಹಾಗೂ ಸೇವಾ ಮನೋಭಾವದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದುರ್ಗಾ ಸಪ್ತಶತಿ ಯ ನಾಲ್ಕನೇ ಅಧ್ಯಾಯವಾದ ಶಾಕಂಭರಿ ಸ್ತುತಿಯಲ್ಲಿರುವ ಶ್ಲೋಕವನ್ನೂ ಉಲ್ಲೇಖಿಸಿದ್ದಾರೆ.

“ದೇವ್ಯಾ ಯಯಾ ತತಮಿದಂ ಜಗದಾತ್ಮಶಕ್ತ್ಯಾ ನಿಶ್ಶೇಷ ದೇವಗಣಶಕ್ತಿ ಸಮೂಹಮೂರ್ತ್ಯಾ” ಎಂಬ ಶ್ಲೋಕವನ್ನು ಉಲ್ಲೇಖಿಸಿದ ಪ್ರಧಾನಿ, ದೇವಿಯು ತನ್ನ ಸ್ವಂತ ಶಕ್ತಿಯಿಂದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾಳೆ ಹಾಗೂ ಎಲ್ಲಾ ದೇವತೆಗಳ ಶಕ್ತಿಯ ಸಮೂಹ ರೂಪವಾಗಿ ಕಾಣಿಸಿಕೊಂಡಿದ್ದಾಳೆ ಎಂದು ವಿವರಿಸಿದ್ದಾರೆ.

“ಎಲ್ಲಾ ದೇವರುಗಳು ಮತ್ತು ಮಹಾನ್ ಋಷಿಗಳು ಪೂಜಿಸುವ ತಾಯಿಯ ಮುಂದೆ ನಾವು ಗೌರವದಿಂದ ತಲೆಬಾಗುತ್ತೇವೆ. ದೇವಿಯ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಉಲ್ಲೇಖಿಸಿದ ಈ ಶ್ಲೋಕವು ದೇವಿಯ ಸರ್ವವ್ಯಾಪಿ, ಶಕ್ತಿ ಸ್ವರೂಪದ ಮಹತ್ವವನ್ನು ಸಾರುತ್ತದೆ. ದೇವಿಯ ಸ್ತುತಿ ಜ್ಞಾನ, ಶಕ್ತಿ ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ ಎಂಬ ನಂಬಿಕೆಯೂ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande