ರಾಜ್ಯ ಸಭೆಯ ಉಪಸಭಾಪತಿ ಹರಿವಂಶ್ ಗೆ ಪ್ರಧಾನಿ ಮೋದಿ ಅಭಿನಂದನೆ
ನವದೆಹಲಿ, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಜ್ಯ ಸಭೆಯ ಉಪ ಸಭಾಪತಿಯಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಭಿನಂದನೆ ಸಲ್ಲಿಸಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹರಿವಂಶ್ ಅವರ ಮರು ಆಯ್ಕೆಯು ಸದನವು ಅವರ ಮೇಲೆ
Pm


ನವದೆಹಲಿ, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಜ್ಯ ಸಭೆಯ ಉಪ ಸಭಾಪತಿಯಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಭಿನಂದನೆ ಸಲ್ಲಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹರಿವಂಶ್ ಅವರ ಮರು ಆಯ್ಕೆಯು ಸದನವು ಅವರ ಮೇಲೆ ಇಟ್ಟಿರುವ ಆಳವಾದ ನಂಬಿಕೆಯ ಸಂಕೇತವಾಗಿದೆ ಎಂದು ಹೇಳಿದರು.

ಹರಿವಂಶ್ ಅವರ ಅನುಭವ, ಸಮತೋಲಿತ ಕಾರ್ಯಶೈಲಿ ಮತ್ತು ಎಲ್ಲರನ್ನು ಜೊತೆಯಲ್ಲಿ ಕೊಂಡೊಯ್ಯುವ ಸಾಮರ್ಥ್ಯಕ್ಕೆ ಸದನವು ಮನ್ನಣೆ ನೀಡಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

“ರಾಜ್ಯಸಭೆಯ ಉಪ ಸಭಾಪತಿಯಾಗಿ ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವುದು ಸದನವು ನಿಮ್ಮ ಮೇಲೆ ಹೊಂದಿರುವ ಆಳವಾದ ನಂಬಿಕೆಯನ್ನು ತೋರಿಸುತ್ತದೆ. ನಿಮ್ಮ ಹಿಂದಿನ ಅನುಭವದಿಂದ ಸದನವು ಪಡೆದ ಪ್ರಯೋಜನಕ್ಕೂ ಇದು ಸಾಕ್ಷಿಯಾಗಿದೆ,” ಎಂದು ಪ್ರಧಾನಿ ಹೇಳಿದರು.

ಹರಿವಂಶ್ ಅವರು ಸದನದ ಕಲಾಪಗಳನ್ನು ಸಮರ್ಥವಾಗಿ ನಡೆಸಿರುವುದಲ್ಲದೆ, ತಮ್ಮ ಹಿಂದಿನ ಅನುಭವಗಳ ಮೂಲಕ ಮೇಲ್ಮನೆಯನ್ನು ಮತ್ತಷ್ಟು ಸಮೃದ್ಧಗೊಳಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದರು.

ಹೊಸ ಅಧಿಕಾರಾವಧಿಯಲ್ಲಿಯೂ ಅವರು ಸಮರ್ಪಣೆ, ಸಮತೋಲನ ಮತ್ತು ಘನತೆಯೊಂದಿಗೆ ಕೆಲಸ ಮುಂದುವರಿಸಲಿದ್ದು, ಸದನವು ಹೊಸ ಎತ್ತರ ತಲುಪಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

ಹರಿವಂಶ್ ಅವರು ಸಾರ್ವಜನಿಕ ಜೀವನ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯನ್ನೂ ಪ್ರಧಾನಿ ಮೆಚ್ಚಿಕೊಂಡರು. ಅವರ ಕಾರ್ಯಶೈಲಿಯಲ್ಲಿ ಸ್ಪಷ್ಟತೆ, ವಿನಯ ಮತ್ತು ಸಭ್ಯತೆ ಕಂಡುಬರುತ್ತದೆ ಎಂದು ಹೇಳಿದರು.

ದೇಶದ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಯುವಕರೊಂದಿಗೆ ನಿರಂತರ ಸಂಪರ್ಕದಲ್ಲಿರುವುದನ್ನು ಪ್ರಧಾನಿ ವಿಶೇಷವಾಗಿ ಉಲ್ಲೇಖಿಸಿದರು.

ಮಗಧ್ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆಗೆ ಹರಿವಂಶ್ ಸಹಕರಿಸಿರುವುದನ್ನೂ ಪ್ರಧಾನಿ ಶ್ಲಾಘಿಸಿದರು. ಗಂಗಾ ಮತ್ತು ಘಾಘ್ರಾ ನದಿಗಳ ನಡುವಿನ ಪ್ರದೇಶಗಳಲ್ಲಿ ಸವೆತ ಸಮಸ್ಯೆ ಪರಿಹರಿಸಲು ನದಿ ಸಂಶೋಧನಾ ಕೇಂದ್ರ ಸ್ಥಾಪಿಸಿರುವುದಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಜನ್ಮ ದಿನಾಚರಣೆಯನ್ನೂ ಉಲ್ಲೇಖಿಸಿದ ಪ್ರಧಾನಿ, ಹರಿವಂಶ್ ಅವರಿಗೆ ಚಂದ್ರಶೇಖರ್ ಅವರೊಂದಿಗೆ ಆಪ್ತ ಸಂಪರ್ಕವಿದ್ದು, ಇದೇ ದಿನ ಅವರು ಮೂರನೇ ಬಾರಿ ಉಪ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande