ಲಾರ್ಕ್ ಸ್ಟುಡಿಯೋಸ್ ಹೊಸ ಸಿನಿಮಾ ಘೋಷಣೆ
ಬೆಂಗಳೂರು, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ಲಾರ್ಕ್ ಸ್ಟುಡಿಯೋಸ್ ಮತ್ತು ಪ್ಯಾರಲಲ್ ಯೂನಿವರ್ಸ್ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರದ ಘೋಷಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ಜಿ.ವಿ. ಪ್ರಕಾಶ್ ಕುಮಾರ್ ನಾಯಕ ನಟನಾಗಿ ಅಭಿನಯಿಸಲಿದ್ದು, ಚಿತ್ರದ ಮೇಲಿನ ನಿರೀಕ್ಷೆಗಳು ಈಗಾಗಲೇ
Movie1


Movie


ಬೆಂಗಳೂರು, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಲಾರ್ಕ್ ಸ್ಟುಡಿಯೋಸ್ ಮತ್ತು ಪ್ಯಾರಲಲ್ ಯೂನಿವರ್ಸ್ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರದ ಘೋಷಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ಜಿ.ವಿ. ಪ್ರಕಾಶ್ ಕುಮಾರ್ ನಾಯಕ ನಟನಾಗಿ ಅಭಿನಯಿಸಲಿದ್ದು, ಚಿತ್ರದ ಮೇಲಿನ ನಿರೀಕ್ಷೆಗಳು ಈಗಾಗಲೇ ಹೆಚ್ಚಾಗಿವೆ.

‘ಗರುಡನ್’ ಮತ್ತು ‘ಮಾಮನ್’ ಚಿತ್ರದ ಬಳಿಕ ಇದು ಲಾರ್ಕ್ ಸ್ಟುಡಿಯೋಸ್ ನಿರ್ಮಾಣದ ಮೂರನೇ ಚಿತ್ರವಾಗಿದ್ದು, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿವೆ. ವಿಮರ್ಶಾತ್ಮಕವಾಗಿ ಹಾಗೂ ವಾಣಿಜ್ಯಾತ್ಮಕವಾಗಿ ದೊಡ್ಡ ಯಶಸ್ಸು ಕಂಡ ಜೋ ಚಿತ್ರದ ಖ್ಯಾತಿಯ ಹರಿಹರನ್ ರಾಮ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ತಮ್ಮ ವಿಭಿನ್ನ ಕಥೆ ಹೇಳುವ ಶೈಲಿಯಿಂದ ಗುರುತಿಸಿಕೊಂಡಿರುವ ಹರಿಹರನ್ ರಾಮ್ ಅವರೊಂದಿಗೆ ಕೆಲಸ ಮಾಡಲು ಜಿ.ವಿ. ಪ್ರಕಾಶ್ ಕುಮಾರ್ ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸುವುದರ ಜೊತೆಗೆ ಸಂಗೀತ ನಿರ್ದೇಶನವನ್ನೂ ನಿರ್ವಹಿಸಲಿದ್ದಾರೆ. ಈ ಸಿನಿಮಾ ಅವರ ವೃತ್ತಿಜೀವನದಲ್ಲಿ ಹೊಸ ಆಯಾಮ ನೀಡುವಂತದ್ದು ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿ ಅವರು ವಿಶೇಷ ತಯಾರಿ ನಡೆಸುತ್ತಿದ್ದಾರೆ.

ಜೋ ಚಿತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಮಾಳವಿಕಾ ಮನೋಜ್ ಈ ಚಿತ್ರದಲ್ಲಿ ಜಿ.ವಿ. ಪ್ರಕಾಶ್ ಕುಮಾರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕರ್ಣನ್ ಮತ್ತು ವಾಲೈ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ತೇಣಿ ಈಶ್ವರ್ ಈ ಚಿತ್ರಕ್ಕೂ ಕ್ಯಾಮೆರಾ ಹಿಡಿಯಲಿದ್ದಾರೆ. ಇನ್ನುಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು.

ಚಿತ್ರದ ಚಿತ್ರೀಕರಣ ಜೂನ್ ತಿಂಗಳಲ್ಲಿ ಆರಂಭವಾಗಲಿದ್ದು, ಸದ್ಯಕ್ಕೆ ವಿವಿಧ ಸ್ಥಳಗಳ ಪರಿಶೀಲನೆ ಮತ್ತು ಲೊಕೇಷನ್ ಹಂಟಿಂಗ್ ಕಾರ್ಯಗಳು ನಡೆಯುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande