


ಬಳ್ಳಾರಿ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಲೆ, ಸಂಸ್ಕøತಿ ಮತ್ತು ಸಂಸ್ಕಾರಗಳನ್ನು ಕಲಿಯುವುದರ ಜೊತೆಯಲ್ಲಿ ಮಕ್ಕಳಲ್ಲಿ ಸಂಸ್ಕøತ ಭಾಷೆಯನ್ನು ಕಲಿಕಾ ಆಸಕ್ತಿಯನ್ನು ಮೂಡಿಸುವುದು ಆಶಾದಾಯಕ ಬೆಳವಣಿಗೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಎನ್. ವೀರಭದ್ರಗೌಡ ಅವರು ತಿಳಿಸಿದ್ದಾರೆ.
ಶ್ರೀ ಸನಾತನ ವೀರಶೈವ ಗುರುಕುಲಮಠ ಟ್ರಸ್ಟ್ ಹಾಗೂ ಸಂಸ್ಕøತ ಭಾರತಿ ಕರ್ನಾಟಕ ಉತ್ತರ ವಿಭಾಗದ ಘಟಕವು ಮಕ್ಕಳಿಗಾಗಿ ಏರ್ಪಡಿಸಿದ್ದ `ಚೈತ್ರ ಸಂಸ್ಕøತ ಶಿಬಿರ'ದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಪಠ್ಯದ ಬೇಸಿಗೆ ಶಿಬಿರಗಳ ಸಂಖ್ಯೆ ಹೆಚ್ಚಿದೆ. ಆದರೆ, ಪಠ್ಯೇತರವಾಗಿ ಸಂಸ್ಕಾರ, ಸಂಸ್ಕøತಿ ಮತ್ತು ಸಂಸ್ಕøತ ಭಾಷೆಯನ್ನು ಕಲಿಸುವ ಈ ಶಿಬಿರವು ಅತ್ಯಂತ ವಿಶೇಷವಾದದ್ದು. ಈ ರೀತಿಯ ಶಿಬಿರಗಳು ಪ್ರತೀ ರಜಾ ಕಾಲದಲ್ಲಿ ನಿರಂತರ ನಡೆಯುವಂತಾಗಲಿ ಎಂದು ಹೇಳಿದರು.
ಶಿಬಿರದ ಮಾರ್ಗದರ್ಶಕರಾದ ನಿವೃತ್ತ ದೈಹಿಕ ಶಿಕ್ಷಕ ಕೆ.ಎಂ. ಸಿದ್ದಲಿಂಗಸ್ವಾಮಿ ಅವರು, ಮಕ್ಕಳಿಗೆ ಕತೆ - ಕಲೆಯ ಮೂಲಕ ಕಲಿಕೆಯ ಕುತೂಹಲವನ್ನು ಹೆಚ್ಚಿಸುವುದು ವಿಶೇಷ ಪ್ರಯತ್ನ. ಈ ಶಿಬಿರದಲ್ಲಿ ಸಂಸ್ಕøತಿ, ಸಂಸ್ಕಾರ ಮತ್ತು ಸಂಸ್ಕøತವನ್ನು ಕಲಿಸುವ ಪ್ರಯತ್ನ ನಡೆದಿರುವುದು ಶ್ಲಾಘನೀಯ. ಅಲ್ಲದೇ, ಶಿಬಿರಾರ್ಥಿಗಳನ್ನು ಪರಿಸರದ ಭಾಗವಾಗಿರುವ ದರೋಜಿ ಕೆರೆ, ಗೋಶಾಲೆ ವೀಕ್ಷಣೆಗೆ ಕರದುಕೊಂಡು ಹೋಗಿರುವುದು ಅತ್ಯುತ್ತಮವಾದ ಪರಿಕಲ್ಪನೆ ಎಂದರು.
ವೀರಶೈವ ಸಮಾಜದ ಮುಖಂಡ ಕೆ.ಎಂ. ಮಹೇಶ್ವರ ಸ್ವಾಮಿ ಅವರು, ಈ ಶಿಬಿರವು ವಿಶೇಷ ಸಂಕಲ್ಪವನ್ನು ಹೊಂದಿದೆ. ಉತ್ತಮವಾದ ಗುರಿಯನ್ನು, ಅತ್ಯುತ್ತಮವಾದ ವಿಚಾರಗಳನ್ನು ಹೊಂದುವ ಮೂಲಕ ಶಿಬಿರಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸುವ ಪ್ರಯತ್ನವನ್ನು ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಹತ್ತು ದಿನಗಳ ಕಾಲ ಕಲಿತ ಸಂಸ್ಕøತದಲ್ಲಿ ಹಾಡು, ಶ್ಲೋಕ, ಕಿರು ನಾಟಕ ಮತ್ತು ಸಾಧನಾ ಯೋಗ ಕೇಂದ್ರದಿಂದ ತರಬೇತಿ ಪಡೆದ ಶಿಬಿರಾರ್ಥಿಗಳು ಪ್ರತಿಭೆಗಳನ್ನು ಪ್ರದರ್ಶನ ಮಾಡಿದರು.
ಶ್ರೀ ಸನಾತನ ವೀರಶೈವ ಗುರುಕುಲ ಮಠ ಟ್ರಸ್ಟ್ನ ಅಧ್ಯಕ್ಷರು, ವೇದಮೂರ್ತಿ ಡಾ. ಜೆ.ಯಂ ಪಂಪಾಪತಿ ಶಾಸ್ತ್ರಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಪಾಲ್ತೂರು ಶ್ರೀಗಳು, ಪಾಲಿಕೆ ಸದಸ್ಯೆಯಾಗಿರುವ ಶ್ರೀಮತಿ ಸುರೇಖ ಮಲ್ಲನಗೌಡ, ಬಿ.ಎಂ. ಮಲ್ಲಿಕಾರ್ಜುನಸ್ವಾಮಿ, ಸಿದ್ಧಾಂತ ಶಿಖಾಮಣಿ ಬೋಧಕಿ ಅನುರಾಧ ಕೆ.ಎಂ. ಸಂಸ್ಕೃತ ಶಿಕ್ಷಕಿ ಚೆನ್ನಮ್ಮ, ಎಂ. ಚಂದ್ರಮೌಳಿ, ಜೋಳದರಾಶಿ ಬಸವರಾಜ್, ಎರ್ರಿಸ್ವಾಮಿ, ಶಿವೇಶ್ವರಗೌಡ, ಶಿವಾನಂದ ಸ್ವಾಮಿ ಬೆಳಗಲ್, ಎಣ್ಣೆ ಎರ್ರಿಸ್ವಾಮಿ, ಓಂಕಾರಸ್ವಾಮಿ ಮಿಂಚೇರಿ ಇನ್ನಿತರರು ವೇದಿಕೆಯಲ್ಲಿದ್ದರು.
ಮಹಾಂತೇಶ ಮೂರ್ತಿ ಕೆ.ಎಂ ಅವರು ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಪ್ರಾರ್ಥನೆ ಮಾಡಿದರು. ಶಿಕ್ಷಕ ಎಸ್.ಎಂ. ಸಿದ್ದೇಶ್ವರ ಅವರು ವಂದನಾರ್ಪಣೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್