ರಾಜಕೀಯ ಬದಿಗೊತ್ತಿ ಮಹಿಳಾ ಮೀಸಲಾತಿಗೆ ಬೆಂಬಲ ಕೊಡಿ : ಬೊಮ್ಮಾಯಿ
ಬೆಂಗಳೂರು, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ಎಲ್ಲರೂ ಒಂದಾಗಿ ಭಾರತದ ಭವಿಷ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲಾ ರಾಜಕೀಯ ಬದಿಗೊತ್ತಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಬೆಂಬಲ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ
ಬೊಮ್ಮಾಯಿ


ಬೆಂಗಳೂರು, 14 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಎಲ್ಲರೂ ಒಂದಾಗಿ ಭಾರತದ ಭವಿಷ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲಾ ರಾಜಕೀಯ ಬದಿಗೊತ್ತಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಬೆಂಬಲ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಿದ್ದು ಲೋಕಸಭಾ ವಿಶೇಷ ಅಧಿವೇಶನ ನಡೆಯುತ್ತಿದೆ. ಅತ್ಯಂತ ಸಂತೋಷದಿಂದ ಪಾರ್ಲಿಮೆಂಟ್ ನೋಡುತ್ತಿದ್ದೇವೆ. ಕ್ರಾಂತಿಕಾರಿಯಾಗಿರುವ ಮಹಿಳಾ ಮೀಸಲಾತಿ ಮತ್ತು ಡಿ ಲಿಮಿಟೇಷನ್ ವಿಚಾರ ಚರ್ಚೆಗೆ ಬರ್ತಿದೆ. ಅಂಬೇಡ್ಕರ್ ಅವರು ಹಿಂದು ಕೋಡ್ ಬಿಲ್ ತಂದಾಗ ಎಲ್ಲಾ ಮಹಿಳೆಯರಿಗೆ ಮೀಸಲಾತಿ ನೀಡಿದ್ದರು. ಅಂಬೇಡ್ಕರ್ ಅವರ ಚಿಂತನೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯಾಗಿದೆ. ಕಾಂಗ್ರೆಸ್ನ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಪೇಕ್ಷೇ ಕೂಡ ಇದಾಗಿತ್ತು. ಎಲ್ಲರೂ ಒಂದಾಗಿ ಭಾರತದ ಭವಿಷ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಅನ್ನುವುದು ಎಲ್ಲರ ಅಪೇಕ್ಷೆ. ಎಲ್ಲಾ ರಾಜಕೀಯ ಬದಿಗೊತ್ತಿ ಮಹಿಳಾ ಮೀಸಲಾತಿ ವಿಧೆಯಕಕ್ಕೆ ಬೆಂಬಲ ಕೊಡಿ ಎಂದು ವಿಪಕ್ಷಗಳಿಗೆ ಕರೆ ಕೊಡುತ್ತೇನೆ. ಇಂತಹ ಐತಿಹಾಸಿಕ ವಿಧೇಯಕ ಬರುವ ಸಂಧರ್ಭದಲ್ಲಿ ಭಾಗಿಯಾಗುವ ಅದೃಷ್ಟ ನಮ್ಮದು ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande