ಕಾಂಗ್ರೆಸ್ ಗೆ ಕಷ್ಟದ ದಿನಗಳು ಬರಲಿವೆ : ಬೊಮ್ಮಾಯಿ
ಬೆಂಗಳೂರು, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಪ ಸಂಖ್ಯಾತ ನಾಯಕರ ವಿಚಾರದಲ್ಲಿ ನಡೆಯುತ್ತಿರುವ ಗೊಂದಲದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಯಾವ ಸಮುದಾಯಗಳನ್ನು ಓಲೈಸಿ, ಮತ ಬ್ಯಾಂಕಾಗಿ ಪರಿವರ್ತನೆ ಮಾಡಿಕೊಂಡಿದ್ದರು. ಅವೆಲ್ಲಾ
BsB


ಬೆಂಗಳೂರು, 14 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಪ ಸಂಖ್ಯಾತ ನಾಯಕರ ವಿಚಾರದಲ್ಲಿ ನಡೆಯುತ್ತಿರುವ ಗೊಂದಲದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಯಾವ ಸಮುದಾಯಗಳನ್ನು ಓಲೈಸಿ, ಮತ ಬ್ಯಾಂಕಾಗಿ ಪರಿವರ್ತನೆ ಮಾಡಿಕೊಂಡಿದ್ದರು. ಅವೆಲ್ಲಾ ಸಮುದಾಯ ಭ್ರಮನಿರಸವಾಗಿವೆ. ಅಲ್ಪಸಂಖ್ಯಾತರ ನಾಯಕರ ಪ್ರಶ್ನೆ ಅಲ್ಲ, ಸಮುದಾಯದಲ್ಲೇ ಆಕ್ರೋಶ ಭುಗಿಲೆದ್ದಿದೆ. ಅದು ಈ ನಾಯಕರ ಮೂಲಕ ಕಾಣಿಸುತ್ತಿದೆ ಎಂದರು.

ಎಸ್ಸಿ ಎಸ್ಟಿ ಸಮುದಾಯಗಳು ಭ್ರಮ ನಿರಸವಾಗಿವೆ. ಬರುವ ದಿನದಲ್ಲಿ ಅವರಿಂದಲೂ ದೊಡ್ಡ ಪ್ರಮಾಣದ ಪ್ರತಿರೋಧ ಎದುರಿಸಬೇಕಾಗುತ್ತದೆ. ಅಹಿಂದ ಸಮುದಾಯ ಅಂತ ಸಿದ್ದರಾಮಯ್ಯ ರಾಜ್ಯಭಾರ ಮಾಡಿದರು. ಅವರಿಗೂ ಏನೂ ಮಾಡಿಲ್ಲ ಅಂತ ಗೊತ್ತಾಗಿದೆ. ಬರುವ ದಿನದಲ್ಲಿ ದಲಿತ ಸಮುದಾಯಗಳು ಕೂಡ ಕಾಂಗ್ರೆಸ್ಗೆ ಪಾಠ ಕಲಿಸಲಿವೆ. ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಲು, ಡಿಸಿಎಂ ಡಿ ಕೆ ಶಿವಕುಮಾರ ಪದವಿ ಪಡೆಯಲು ಕುರ್ಚಿ ಕಚ್ಚಾಟ ನಡೆಯುತ್ತಿದೆ. ಇವೆಲ್ಲಾ ಬೇರ ಪರಿಣಾಮ ಬೀರಲಿದೆ. ಬರುವ ದಿನದಲ್ಲಿ ಕಷ್ಟದ ದಿನಗಳು ಕಾಣಲಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande