
ದಾವಣಗೆರೆ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ 2024-25ನೇ ಸಾಲಿನ ಡಿ.ಎಂ.ಎಫ್. (ಜಿಲ್ಲಾ ಖನಿಜ ನಿಧಿ) ಯೋಜನೆಯ 8ನೇ ಹಂತದಡಿ ಅನುಮೋದನೆಗೊಂಡ ಪ್ರಮುಖ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಈ ಯೋಜನೆಯಡಿಯಲ್ಲಿ ಹರಪನಹಳ್ಳಿ ಪಟ್ಟಣದ ತೆಗ್ಗಿನ ಮಠದಿಂದ ಲಂಡನ್ ಹಳ್ಳದವರೆಗೆ (ಅಯ್ಯನಕೆರೆವರೆಗೆ) ನೈರ್ಮಲೀಕರಣ, ರಾಜಕಾಲುವೆ ನಿರ್ಮಾಣ ಹಾಗೂ ಕ್ರಾಸ್ ಕಲ್ವರ್ಟ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ಕಾಮಗಾರಿಯಿಂದ ಪಟ್ಟಣದ ಒಳಚರಂಡಿ ವ್ಯವಸ್ಥೆ ಸುಧಾರಣೆಯಾಗಲಿದ್ದು, ಮಳೆಯ ಸಮಯದಲ್ಲಿ ಉಂಟಾಗುವ ನೀರು ನಿಲುವಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa