ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ ದೈವತ್ವಕ್ಕೆ ಸಮಾನ : ಜ್ಯೋತಿ ಗೊಂಡಬಾಳ
ಕೊಪ್ಪಳ, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ಭಾರತದ ನವನಿರ್ಮಾತೃ, ಬಾಬಾಸಾಹೇಬ್ ಅಂಬೇಡ್ಕರ್ ಅವರು ವ್ಯಕ್ತಿಯಲ್ಲ, ಅವರೊಬ್ಬ ದಿವ್ಯ ಶಕ್ತಿ, ದೈವತ್ವಕ್ಕೆ ಸಮಾನ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಹೇಳಿದರು. ಅವರು ನಗರಸಭೆ ಮುಂದುಗಡೆ ನಡೆಯುತ್ತಿರುವ ಬಲ್ಡೋಟ ತೊಲಗಿ
ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ ದೈವತ್ವಕ್ಕೆ ಸಮಾನ : ಜ್ಯೋತಿ ಗೊಂಡಬಾಳ


ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ ದೈವತ್ವಕ್ಕೆ ಸಮಾನ : ಜ್ಯೋತಿ ಗೊಂಡಬಾಳ


ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ ದೈವತ್ವಕ್ಕೆ ಸಮಾನ : ಜ್ಯೋತಿ ಗೊಂಡಬಾಳ


ಕೊಪ್ಪಳ, 14 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭಾರತದ ನವನಿರ್ಮಾತೃ, ಬಾಬಾಸಾಹೇಬ್ ಅಂಬೇಡ್ಕರ್ ಅವರು ವ್ಯಕ್ತಿಯಲ್ಲ, ಅವರೊಬ್ಬ ದಿವ್ಯ ಶಕ್ತಿ, ದೈವತ್ವಕ್ಕೆ ಸಮಾನ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಹೇಳಿದರು.

ಅವರು ನಗರಸಭೆ ಮುಂದುಗಡೆ ನಡೆಯುತ್ತಿರುವ ಬಲ್ಡೋಟ ತೊಲಗಿಸಿ ಹೋರಾಟ ಹಾಗೂ ಕಾರ್ಖಾನೆ ಬಾಧಿತ ಪ್ರದೇಶ ಪುನರುಜ್ಜೀವನಗೊಳಿಸಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜನ್ಮಜಯಂತಿ ಆಚರಣೆಯಲ್ಲಿ ಮಾತನಾಡಿದರು.

166ನೇ ದಿನದ ಕಾರ್ಖಾನೆ ವಿರೋಧಿ ಧರಣಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿ, ಈ ದೇಶ ಪುರಾಣ ಕಾಲದಿಂದಲೂ ಒಂದು ವರ್ಗದ ಜನರ ಶೋಷಣೆಯನ್ನೇ ಅಸ್ತ್ರವಾಗಿ ಮಾಡಿಕೊಂಡು ಬಂದಿದೆ. ಬ್ರಿಟಿಷರು ಇದನ್ನು ತಮ್ಮ ಆಳ್ವಿಕೆಗೆ ಬುನಾದಿಯಾಗಿ ಮಾಡಿಕೊಂಡಿದ್ದರು. ಇಲ್ಲಿನ ಸಾಂಪ್ರದಾಯಿಕ ವಿಚಾರಗಳು ಮಹಿಳೆಯರು ಸೊಲ್ಲೆತ್ತದಂತೆ ಮಾಡಿದ್ದವು. ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ದಂಪತಿಗಳು ಶಿಕ್ಷಣವನ್ನು ಮಹಿಳೆಯರಿಗೆ ಧಾರೆ ಎರೆದು ಪ್ರಜ್ಞೆ ಮೂಡಿಸುವಾಗ ಅನುಭವಿಸಿದ ಕಷ್ಷ ಅಷ್ಟಿಷ್ಟಲ್ಲ. ಇವರ ದಾರಿಯನ್ನು ಆದರ್ಶವಾಗಿ ಸ್ವೀಕರಿಸಿದ ಡಾ. ಬಾಬಾಸಾಹೇಬರು ತಮ್ಮ ಜೀವಿತ ಕಾಲದಲ್ಲಿ ಮಹಿಳೆಯರು ವಿಮೋಚನೆಯಾಗಬೇಕು ಎಂದು ಕನಸು ಕಟ್ಟಿಕೊಂಡು 'ಹಿಂದೂ ಕೋಡ್ ಬಿಲ್' ಜಾರಿಗೆ ಬರಬೇಕು ಎಂದಿದ್ದರು. ಅದು ಜಾರಿಯಾಗುವುದಿಲ್ಲ ಎಂದಾಗ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಸಂಸತ್ತಿನಿಂದ ಹೊರ ಬಂದಿದ್ದರು. ಅದು ಈವರೆಗೆ ಈಡೇರಿಲ್ಲ. ಆದರೂ ಸಂವಿಧಾನದ ಪಿತಾಮಹರಾಗಿ ಏನೆಲ್ಲಾ ಹಕ್ಕುಗಳನ್ನು ಕೊಡಬೇಕಾಗಿತ್ತೋ ಆ ಅವಕಾಶವನ್ನು ಮಾಡಿದ್ದರಿಂದಲೇ ಇವತ್ತು ಇಂತ ಧೈತ್ಯ ಕಾರ್ಪೋರೇಟ್ ಕಾರ್ಖಾನೆ ವಿರೋಧಿ ಹೋರಾಟದಲ್ಲಿ ನಿಂತು ಮಾತನಾಡುತಿದ್ದೇನೆ. ಇದೇ ಸಂವಿಧಾನ, ಕಾನೂನು ಅಸ್ತ್ರ ಬಳಸಿಕೊಂಡು ಒಗ್ಗಟ್ಟಿನಿಂದ ಹೋರಾಡಿ ಗೆದ್ದು ಜೀವ, ಆರೋಗ್ಯ ಕಾಪಾಡಿಕೊಳ್ಳೋಣ ಎಂದರು.

ಕ್ರಿಯಾ ವೇದಿಕೆ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಬಲ್ಡೋಟ ಎಂ.ಎಸ್.ಪಿ.ಎಲ್ 2011ರಿಂದ ನಡೆಯುತ್ತಿರುವ ಪೆಲ್ಲೆಟ್ ಘಟಕ ಕೊಪ್ಪಳ ನಗರ ಜನರ ಆರೋಗ್ಯ ದೃಷ್ಟಿಯಿಂದ ಬಂದ್ ಮಾಡಬೇಕು, ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಮಾಲಿನ್ಯಕಾರಿ ಸ್ಪಾಂಜ್ ಐರನ್ ಘಟಕಗಳನ್ನು ಅಲ್ಲಿಂದ ತೊಲಗಬೇಕು, ಬಸಾಪುರ ಕೆರೆ ಹೈಕೋರ್ಟ್ ಆದೇಶದಂತೆ ಜನ ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು. ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಬೇಕು, ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಫ್ರಭು ಬೆಟ್ಟದೂರು, ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಮಾಜಿ ಪಟ್ಟಣ ಪಂಚಾಯತಿ ಸದಸ್ಯೆ ಸರೋಜಾ ಬಾಕಳೆ, ನಿವೃತ್ತ ಪ್ರಾಚಾರ್ಯ ಎಸ್. ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಿ. ಜಿ. ಕರಿಗಾರ ಮಾತನಾಡಿದರು. ರವಿ ಕಾಂತನವರ, ಶರಣು ಶೆಟ್ಟರ್, ರಾಜಶೇಖರ ಏಳುಬಾವಿ, ದೇವೇಂದ್ರಪ್ಪ ಕೋಳೂರು, ಮೂಕಪ್ಪ ಮೇಸ್ತ್ರಿ ಬಸಾಪುರ, ಬಸವರಾಜ ನರೇಗಲ್, ಗಾಳೆಪ್ಪ ಪೂಜಾರ, ಎಸ್. ಎಂ. ಕಂಬಾಳಿಮಠ, ಪಂಪಣ್ಣ ಚಿಂತಪಲ್ಲಿ, ಗುರುರಾಜ ಕುಲಕರ್ಣಿ, ಪದ್ಮಾವತಿ ಡಿ, ರಮೇಶ ಪಿ.ಬಿ, ಶಿವರಾಜ ಎಚ್, ಯಲ್ಲಪ್ಪ ಆಡಿನ್, ಶಿವಪ್ಪ ಹಲಗೇರಿ, ಮಹಾದೇವಪ್ಪ ಮಾವಿನಮಡು, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ನಾಗರಾಜ ಕುಷ್ಟಗಿ, ಬಸಪ್ಪ ಕಲಕೇರಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande