
ಮೈಸೂರು, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅಸಭ್ಯ ವರ್ತನೆಗಳನ್ನು ತಡೆಯುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲಿ ‘ಅಕ್ಕ ಪಡೆ’ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಇಂದು ‘ಅಕ್ಕ ಪಡೆ’ ಸಿಬ್ಬಂದಿಗಳು ವರುಣ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಹಳ್ಳಿ ಬಸ್ ನಿಲ್ದಾಣದ ಬಳಿ ಗಸ್ತು ನಡೆಸಿ, ಸಾರ್ವಜನಿಕರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಸರಗಳ್ಳತನ, ಭಿಕ್ಷಾಟನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಸುರಕ್ಷತಾ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು. ಜೊತೆಗೆ ತುರ್ತು ಸಹಾಯಕ್ಕಾಗಿ ‘ಅಕ್ಕ ಪಡೆ’ ಸಹಾಯವಾಣಿ ಸಂಖ್ಯೆ 181 ಕುರಿತು ಮಾಹಿತಿ ನೀಡಲಾಯಿತು.
ಮಹಿಳೆಯರು ಯಾವುದೇ ತೊಂದರೆ ಎದುರಿಸಿದಾಗ ತಕ್ಷಣ ಸಹಾಯವಾಣಿ ಸಂಪರ್ಕಿಸಲು ಅಧಿಕಾರಿಗಳು ಮನವಿ ಮಾಡಿದರು. ಇಂತಹ ಗಸ್ತು ಹಾಗೂ ಜಾಗೃತಿ ಕಾರ್ಯಕ್ರಮಗಳು ಮಹಿಳೆಯರ ಭದ್ರತೆ ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa