ಎರೆಡು ಅಪಘಾತ : ಇಬ್ಬರು ಸಾವು
ಬಳ್ಳಾರಿ, 13 ಏಪ್ರಿಲ್ (ಹಿ.ಸ.) : ಆ್ಯಂಕರ್ : ಈಶಾನ್ಯ ಸಾರಿಗೆ ಸಂಸ್ಥೆಯ ಬ್ರೇಕ್ ಸರಿಪಡಿಸಲು ಬಸ್ ಚಾಲಕ ಹೇಳಿದ್ದರೂ, ಸರಿಪಡಿಸದೇ ಮೆಕ್ಯಾನಿಕ್ಗಳು ನಿರ್ಲಕ್ಷ್ಯ ತೋರಿಸಿದ ಕಾರಣ ಯುವಕನು ಸ್ಥಳದಲ್ಲೇ ಮೃತಪಡುವಂತಾಗಿದೆ. ಮೃತನು ಆಂಧ್ರಪ್ರದೇಶದ ಬೊಮ್ಮನಹಾಳ್ ಗ್ರಾಮ ನಿವಾಸಿ ರವಿ ಎಂದು ಪೊಲೀಸರು ತಿಳ
ಎರೆಡು ಅಪಘಾತ : ಇಬ್ಬರು ಸಾವು


ಬಳ್ಳಾರಿ, 13 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಈಶಾನ್ಯ ಸಾರಿಗೆ ಸಂಸ್ಥೆಯ ಬ್ರೇಕ್ ಸರಿಪಡಿಸಲು ಬಸ್ ಚಾಲಕ ಹೇಳಿದ್ದರೂ, ಸರಿಪಡಿಸದೇ ಮೆಕ್ಯಾನಿಕ್ಗಳು ನಿರ್ಲಕ್ಷ್ಯ ತೋರಿಸಿದ ಕಾರಣ ಯುವಕನು ಸ್ಥಳದಲ್ಲೇ ಮೃತಪಡುವಂತಾಗಿದೆ.

ಮೃತನು ಆಂಧ್ರಪ್ರದೇಶದ ಬೊಮ್ಮನಹಾಳ್ ಗ್ರಾಮ ನಿವಾಸಿ ರವಿ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಹೊಸ ಬಸ್ ನಿಲ್ದಾಣದ ಮುಂಭಾಗದ ಡಾ. ಜೋಳದರಾಶಿ ದೊಡ್ಡನಗೌಡರ ರಂಮಂದಿರದ ಮುಂದಿರುವ ಸರ್ಕಲ್ನಲ್ಲಿ ಎಲೆಕ್ಟ್ರಿಕಲ್ ಏಥರ್ ಬೈಕ್ ಚಾಲನೆ ಮಾಡುತ್ತಿದ್ದ ಆಂಧ್ರಪ್ರದೇಶದ ಬೊಮ್ಮನಹಾಳ್ನ ರವಿ ಸರ್ಕಾರಿ ಬಸ್ ಮತ್ತು ಲಾರಿಯ ಮಧ್ಯೆ ಸಿಲುಕಿ, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿನಿಲಾರಿ ಡಿಕ್ಕಿ, ಕೂಲಿಕಾರ ಸಾವು

ಬಳ್ಳಾರಿಯ ಇಂದಿರಾಗಾಂಧಿ (ಸಂಗಂ) ವೃತ್ತದಲ್ಲಿ ಪಾದಾಚಾರಿಯಾಗಿದ್ದ ಕುಡತಿನಿ ನಿವಾಸಿ, ಕೂಲಿಕಾರ ಪರಶುರಾಮ್ (32)ನಿಗೆ ಮಿನಿ ಲಾರಿಯು ಡಿಕ್ಕಿ ಹೊಡೆದ ಕಾರಣ ಆತನು ಸ್ಥಳದಲ್ಲೇ ನೆಲಕ್ಕೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎರೆಡು ಪ್ರತ್ಯೇಕ ಪ್ರಕರಣಗಳನ್ನು ಸಂಚಾರಿ ಪೊಲೀಸರು ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande