ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ತಾಂತ್ರಿಕ ವಿದ್ಯಾಲಯ ಪೂರಕ
ಗದಗ, 13 ಏಪ್ರಿಲ್ (ಹಿ.ಸ.) : ಆ್ಯಂಕರ್ : ಎಸ್ಎಸ್ಎಲ್ಸಿ, ಐ ಟಿ ಐ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಗದಗದ ಪ್ರತಿಷ್ಠಿತ ಜಿ-ಎನ್ಟಿಟಿಎಫ್ ತಾಂತ್ರಿಕ ವಿದ್ಯಾಲಯ ಪೂರಕವಾಗಿದೆ. ಮುದ್ರಣಕಾಶಿ ಗದಗ ಜಿಲ್ಲೆಯು ಪೂರ್ವಕ್ಕೆ ಕನಾ೯ಟಕ ರಾಜ್ಯದ ಅತ್ಯುತ್ತಮ ಬೀಜ ಉತ್ಪಾದನಾ ಕೇಂದ್ರವಾದ
ಫೋಟೋ


ಗದಗ, 13 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಎಸ್ಎಸ್ಎಲ್ಸಿ, ಐ ಟಿ ಐ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ಗದಗದ ಪ್ರತಿಷ್ಠಿತ ಜಿ-ಎನ್ಟಿಟಿಎಫ್ ತಾಂತ್ರಿಕ ವಿದ್ಯಾಲಯ ಪೂರಕವಾಗಿದೆ.

ಮುದ್ರಣಕಾಶಿ ಗದಗ ಜಿಲ್ಲೆಯು ಪೂರ್ವಕ್ಕೆ ಕನಾ೯ಟಕ ರಾಜ್ಯದ ಅತ್ಯುತ್ತಮ ಬೀಜ ಉತ್ಪಾದನಾ ಕೇಂದ್ರವಾದ ಕೊಪ್ಪಳ ಜಿಲ್ಲೆ, ಪಶ್ಚಿಮಕ್ಕೆ ಕರ್ನಾಟಕ ರಾಜ್ಯದ ಅತ್ಯುತ್ತಮ ಪೇಡಾ ನಗರವಾದ ಧಾರವಾಡ ಜಿಲ್ಲೆ, ಏಲಕ್ಕಿ ಮಾಲೆಗಳು ಬ್ಯಾಡಗಿ ಕೆಂಪು ಮೆಣಸಿನಕಾಯಿ ಪ್ರಸಿದವಾದ ನಾಡು ಹಾವೇರಿ ಮತ್ತು ಪಾರಂಪರಿಕ ತಾಣಗಳು, ಖನಿಜ ಕೈಗಾರಿಕೆಯಿಂದ ಕೂಡಿರುವ ಬಳ್ಳಾರಿ ಜಿಲ್ಲೆ, ಉತ್ತರಕ್ಕೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನವಾದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಿಂದ ಕೂಡಿರುವ ಬಾಗಲಕೋಟೆ ಜಿಲ್ಲೆ. ಹೀಗೆ 5 ಜಿಲ್ಲೆಗಳ ಮಧ್ಯದಲ್ಲಿರುವದೇ ನಮ್ಮ-ನಿಮ್ಮೆಲ್ಲರ ನೆಚ್ಚಿನ ಹಿಂದುಸ್ತಾನಿ ಸಂಗೀತದ ಪ್ರಮುಖ ಜಿಲ್ಲೆ ಗದಗ ಆಗಿದೆ.

ಸರಿಸುಮಾರು ಕಳೆದ ಆರೂವರೆ ದಶಕಗಳಿಂದ ಎನ್ ಟಿಟಿ ಎಫ್ ವಿದ್ಯಾಲಯ ಉತ್ಕೃಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವ ಕಾಯಕದಲ್ಲಿ ನಿರಂತರ ತೊಡಗಿಸಿಕೊಂಡಿರುತ್ತದೆ. ಪ್ರಸ್ತುತ ಆಧುನಿಕ ತಾಂತ್ರಿಕ ಉದ್ಯಮಗಳಿಗೆ ಅವಶ್ಯವಿರುವ ಕ್ಲಿಷ್ಟಕರವಾದ ಹಾಗೂ ಸೂಕ್ಷ್ಮ ತಾಂತ್ರಿಕ ಕೌಶಲ್ಯಗಳನ್ನು ತನ್ನ ಪಠ್ಯಕ್ರಮದಲ್ಲಿ ನಿರಂತರ ಅಳವಡಿಸಿಕೊಂಡಿರುವ ಈ ವಿಶಿಷ್ಟ ಕಾರಣದಿಂದಾಗಿಯೇ, ಇಲ್ಲಿಂದ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಕೇವಲ ನಮ್ಮ ರಾಜ್ಯ ಹಾಗೂ ದೇಶದ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಉದ್ಯಮಗಳಲ್ಲಿ ಬೇಡಿಕೆ ಇರುವುದಲ್ಲದೇ,

ಹೊರದೇಶಗಳಲ್ಲಿಯೂ ಉದ್ಯೋಗ ಗಿಟ್ಟಿಸಿಕೊಂಡಿರುತ್ತಾರೆ ಹಾಗೂ ಉದ್ಯೋಗಗಳನ್ನು ಸೃಷ್ಟಿಸಿರುತ್ತಾರೆ.

ಅಷ್ಟೇ ಅಲ್ಲದೇ, ಇನ್ನೂ ಅನೇಕ ವಿದ್ಯಾರ್ಥಿಗಳು ಹಲವಾರು ಉದ್ಯಮಗಳಲ್ಲಿ ಪರಿಣಿತಿ ಪಡೆದು ತಮ್ಮದೇ ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಉದಯೋನ್ಮುಖ ಉದ್ಯಮಿಗಳಾಗಿದ್ದಾರೆ.

ಪ್ರಸ್ತುತ 2026ನೇ ವರ್ಷದ ತರಗತಿಗಳಿಗೆ ಪ್ರವೇಶಗಳ ದಾಖಲಾತಿ ಪ್ರಾರಂಭಿಸಲಾಗಿದೆ. ಈ ಸುವರ್ಣ ಅವಕಾಶದ ಲಾಭವನ್ನು ಎಸ್ಎಸ್ಎಲ್ಸಿ, ಐಟಿಐ ಹಾಗೂ ಪಿಯುಸಿ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಎಸ್ಎಸ್ಎಲ್ಸಿ, ಐಟಿಐ ಹಾಗೂ ಪಿಯುಸಿ ಪಾಸಾದ 24 ವರ್ಷದೊಳಗಿನ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗಾಗಿ ಅಧಿಕೃತ ವೆಬ್ ಸೈಟ್ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ 9740565201 ಸಂರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande