
ಬಳ್ಳಾರಿ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಬಿ.ಐ.ಟಿ.ಎಂ) ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ವಿಂಧ್ಯ ಆರ್ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ವತಿಯಿಂದ ಪಿಎಚ್.ಡಿ ಪದವಿ ಪ್ರದಾನಗೊಂಡಿದೆ.
ಅವರು “Studies on Clinically Important O, N & S-Donor Ligands and Their Metal Complexes” ಎಂಬ ಮಹತ್ವದ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದ್ದು, ಈ ಅಧ್ಯಯನವು ವೈದ್ಯಕೀಯ ಕ್ಷೇತ್ರದಲ್ಲಿ ಉಪಯುಕ್ತವಾಗುವ ಲಿಗ್ಯಾಂಡ್ಗಳು ಹಾಗೂ ಅವುಗಳ ಮೆಟಲ್ ಕಾಂಪ್ಲೆಕ್ಸ್ಗಳ ಕುರಿತಾಗಿ ಮಹತ್ತರವಾದ ಮಾಹಿತಿ ನೀಡುವಂತಿದೆ.
ಈ ಸಂಶೋಧನೆಗೆ ಬಿ.ಐ.ಟಿ.ಎಂ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಹಾಗೂ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ. ಸುರೇಶ್ ಅವರ ಮಾರ್ಗದರ್ಶನ ದೊರಕಿದೆ. ಜೊತೆಗೆ, ಆರ್.ವೈ.ಎಂ.ಇ.ಸಿ (ರಾವ್ ಬಹದ್ದೂರ್ ವೈ. ಮಹಾಬಲೆಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ), ಬಳ್ಳಾರಿಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಹಿರೆಮಠ್ ಸುರೇಶ್ ಬಾಬು ಅವರು ಸಹ ಸಹಮಾರ್ಗದರ್ಶಕರಾಗಿ ಅಮೂಲ್ಯ ಮಾರ್ಗದರ್ಶನ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್