ಕವಿಗಳ ಕಣ್ಣಲ್ಲಿ ಮಾಲಿಕೆ `ನಮ್ಮ ಊರು - ನಮ್ಮ ಜಿಲ್ಲೆ' ಹಾಗೂ `ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್' ಕವಿಗೋಷ್ಠಿ
ಕೊಪ್ಪಳ, 13 ಏಪ್ರಿಲ್ (ಹಿ.ಸ.) : ಆ್ಯಂಕರ್ : ದಿನಾಂಕ 7, 8, 9, 10-ಮೇ-2026ರಲ್ಲಿ ನಾಲ್ಕು ದಿನಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9.30 ರವರೆಗೆ, ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸೋದ್ಯಮ ಸಪ್ತಾಹ, ಅಖಿಲ ಕರ್ನಾಟಕ ಮಕ
ಕವಿಗಳ ಕಣ್ಣಲ್ಲಿ ಮಾಲಿಕೆ `ನಮ್ಮ ಊರು - ನಮ್ಮ ಜಿಲ್ಲೆ'  ಹಾಗೂ `ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್' ಕವಿಗೋಷ್ಠಿ


ಕೊಪ್ಪಳ, 13 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದಿನಾಂಕ 7, 8, 9, 10-ಮೇ-2026ರಲ್ಲಿ ನಾಲ್ಕು ದಿನಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9.30 ರವರೆಗೆ, ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಕೊಪ್ಪಳ ಜಿಲ್ಲಾ ಸಾಂಸ್ಕøತಿಕ ಪ್ರವಾಸೋದ್ಯಮ ಸಪ್ತಾಹ, ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 12ನೇ ಸಮ್ಮೇಳನ, 75ನೇ ಸಾಂಸ್ಕøತಿಕ ಕಲಾ ಪ್ರತಿಭೋತ್ಸವವು, ಕೊಪ್ಪಳ ತಾಲ್ಲೂಕಿನ ಬಿಸರಹಳ್ಳಿಯ ಹಿರಿಯ ಸಾಹಿತಿಗಳಾದ ಮಲ್ಲಿಕಾರ್ಜುನ ಹಿರೇಮಠರ ಸರ್ವಾಧ್ಯಕ್ಷತೆಯಲ್ಲಿ ಮೇಲ್ಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣ, ಉಪನ್ಯಾಸ, ನೃತ್ಯ, ಸಂಗೀತ, ಹಾಡುಗಾರಿಕೆ, ಕವಿಗೋಷ್ಠಿ, ಜಾನಪದ ಕಲೆಗಳ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಎರಡು ಕವಿಗೋಷ್ಠಿಗಳಿದ್ದು, 08-05-2026 ರಂದು ಚುಟುಕು ಸಾಹಿತ್ಯ ಪರಿಷತ್, ಕೊಪ್ಪಳ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹಾಗೂ 09-05-2026 ರಂದು ಸಿರಿಗನ್ನಡ ರಾಷ್ಟ್ರೀಯ ವೇದಿಕೆ ರಾಜ್ಯಾಧ್ಯಕ್ಷ ಜಿ.ಎಸ್. ಗೋನಾಳ್ರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಕವಿತೆ 20 ಸಾಲಿನೊಳಗಿರಬೇಕು, ಚುಟುಕು 4 ಸಾಲಿನ 3 ಚುಟುಕುಗಳಿಗೆ ಅವಕಾಶವಿದ್ದು, ಭಾಗವಹಿಸಲು ಇಚ್ಚಿಸುವವರಲ್ಲಿ ಹಿರಿಯರೊಂದಿಗೆ 15 ವರ್ಷದೊಳಗಿನ ಮಕ್ಕಳಿಗು ಅವಕಾಶವಿದೆ.

ಕವನ ಅಥವಾ ಚುಟುಕಿನ ಡಿಟಿಪಿ ಪ್ರತಿಯೊಂದಿಗೆ, ತಮ್ಮ 2 ಭಾವಚಿತ್ರ, ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ, ದಿನಾಂಕ 25-04-2026 ರೊಳಗೆ ಕಡ್ಡಾಯವಾಗಿ ತಲುಪುವಂತೆ, ಕೆಳಕಂಡ ವಿಳಾಸಕ್ಕೆ ಕಳುಹಿಸಿ. ಸ್ಥಳೀಯರು ಅಧ್ಯಕ್ಷರ ಬಳಿ ತಲುಪಿಸಬಹುದು. (ಸೂಚನೆ : ವಾಟ್ಸಾಪ್ ಮೂಲಕ ಕಳುಹಿಸುವ ಕವನ ಮತ್ತು ಮನವಿಯನ್ನು ಪರಿಗಣಿಸುವುದಿಲ್ಲ)

ಹೆಚ್ಚಿನ ಮಾಹಿತಿಗಾಗಿ ರಮೇಶ ಸುರ್ವೆ ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ.) , ನಂ. 468, 13ನೇ ಮುಖ್ಯರಸ್ತೆ, 3ನೇ ಹಂತ, ಮಂಜುನಾಥನಗರ, ಬೆಂಗಳೂರು - 560010. ಮೊಬೈಲ್ : 9845307327 ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande