ಚಾರ್ ಧಾಮ್ ಯಾತ್ರೆ ; 14.5 ಲಕ್ಷಕ್ಕೂ ಹೆಚ್ಚು ನೋಂದಣಿ
ಡೆಹ್ರಾಡೂನ್, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದ ಪ್ರಸಿದ್ಧ ಚಾರ್ ಧಾಮ್ ಯಾತ್ರೆ–2026ಗೆ ಭಕ್ತರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 14.5 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ಒಟ್ಟು 14,54,897 ನೋಂ
ಕೇದಾರನಾಥ ದೇವಾಲಯ


ಡೆಹ್ರಾಡೂನ್, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಪ್ರಸಿದ್ಧ ಚಾರ್ ಧಾಮ್ ಯಾತ್ರೆ–2026ಗೆ ಭಕ್ತರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 14.5 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ಒಟ್ಟು 14,54,897 ನೋಂದಣಿಗಳಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಅತಿ ಹೆಚ್ಚು—4,95,173—ಯಾತ್ರಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ನಂತರ ಬದ್ರೀನಾಥ ದೇವಸ್ಥಾನಕ್ಕೆ 4,29,416, ಗಂಗೋತ್ರಿ ದೇವಸ್ಥಾನಕ್ಕೆ 2,62,485 ಮತ್ತು ಯಮುನೋತ್ರಿ ದೇವಸ್ಥಾನಕ್ಕೆ 2,55,609 ನೋಂದಣಿಗಳು ದಾಖಲಾಗಿವೆ. ಇನ್ನು ಹೇಮಕುಂಡ್ ಸಾಹಿಬ್ ಯಾತ್ರೆಗೆ 12,214 ಭಕ್ತರು ಹೆಸರು ನೋಂದಾಯಿಸಿದ್ದಾರೆ.

ಆಫ್ಲೈನ್ ನೋಂದಣಿ ಕೇಂದ್ರಗಳಾದ ಹರಿದ್ವಾರ, ಋಷಿಕೇಶ್ ಸೇರಿದಂತೆ ಹಲವು ಸ್ಥಳಗಳಲ್ಲಿ ಇಂದು ಹೊಸ ನೋಂದಣಿಗಳು ದಾಖಲಾಗಿಲ್ಲ. ಆದರೆ ಏಪ್ರಿಲ್ 17ರಿಂದ ಆಫ್ಲೈನ್ ನೋಂದಣಿ ಪ್ರಾರಂಭವಾಗಲಿದೆ. ಆನ್ಲೈನ್ ನೋಂದಣಿ ಮಾರ್ಚ್ 6ರಿಂದ ನಿರಂತರವಾಗಿ ನಡೆಯುತ್ತಿದೆ.

ದ್ವಾರ ತೆರೆಯುವ ದಿನಾಂಕಗಳು:

ಗಂಗೋತ್ರಿ ಮತ್ತು ಯಮುನೋತ್ರಿ: ಏಪ್ರಿಲ್ 19

ಕೇದಾರನಾಥ: ಏಪ್ರಿಲ್ 22

ಬದ್ರೀನಾಥ: ಏಪ್ರಿಲ್ 23

ರಾಜ್ಯ ಸರ್ಕಾರವು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಭದ್ರತೆ, ಆರೋಗ್ಯ ಸೇವೆಗಳು, ಸಾರಿಗೆ ವ್ಯವಸ್ಥೆ ಹಾಗೂ ಡಿಜಿಟಲ್ ನೋಂದಣಿ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಿದೆ. ದೇಶ-ವಿದೇಶಗಳಿಂದ ಬರುವ ಭಕ್ತರಿಗೆ ಸುಗಮ ಹಾಗೂ ಸುರಕ್ಷಿತ ಯಾತ್ರೆ ಅನುಭವ ಒದಗಿಸುವತ್ತ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭಕ್ತರು ಅಧಿಕೃತ ವೆಬ್ಸೈಟ್ ಹಾಗೂ “ಟೂರಿಸ್ಟ್ ಕೇರ್ ಉತ್ತರಾಖಂಡ್” ಮೊಬೈಲ್ ಆಪ್ ಮೂಲಕ ನೋಂದಾಯಿಸಿಕೊಳ್ಳಬಹುದು. ಜೊತೆಗೆ ಸಹಾಯವಾಣಿ ಸಂಖ್ಯೆ 1364 ಮತ್ತು 0135-3520100 ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ. ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಮೂಲಕ ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ಗೆ ಹೆಲಿ ಸೇವಾ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯೂ ಲಭ್ಯವಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande