ಸಬ್ ಜೂನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ಫೈನಲಗೆ ಮಧ್ಯ ಪ್ರದೇಶ
ಚಾಂಪಿಯನ್ ಶಿಪ್
ಹಾಕಿ


ನವದೆಹಲಿ, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಿಹಾರದ ರಾಜ್ಗೀರ್ನಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಸಬ್-ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ತನ್ನ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 12ರಂದು ನಡೆಯಲಿರುವ ಫೈನಲ್ ಪಂದ್ಯಗಳಿಗೆ ಕ್ರೀಡಾಭಿಮಾನಿಗಳ ಕುತೂಹಲ ತಾರಕಕ್ಕೇರಿದೆ.

ಪುರುಷರ ವಿಭಾಗ: ಅಜೇಯ ತಂಡಗಳ ಕಾಳಗ

ಪುರುಷರ ಫೈನಲ್ನಲ್ಲಿ ಹಾಕಿ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಹಾಕಿ ತಂಡ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈವರೆಗೆ ಅಜೇಯ ಸಾಧನೆ ತೋರಿವೆ.

ಸೆಮಿಫೈನಲ್ನಲ್ಲಿ ಮಧ್ಯಪ್ರದೇಶ ತಂಡವು ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದಿಯು ತಂಡವನ್ನು 4-2 ಅಂತರದಿಂದ ಸೋಲಿಸಿದರೆ, ಉತ್ತರ ಪ್ರದೇಶ ತಂಡವು ಹಾಲಿ ಚಾಂಪಿಯನ್ ಹಾಕಿ ಪಂಜಾಬ್ ತಂಡವನ್ನು 6-2 ಗೋಲುಗಳಿಂದ ಮಣಿಸಿತು.

ಉತ್ತರ ಪ್ರದೇಶದ ಶಾರುಖ್ ಅಲಿ 14 ಗೋಲುಗಳೊಂದಿಗೆ ಟೂರ್ನಿಯ ಅಗ್ರ ಸ್ಕೋರರ್ ಆಗಿದ್ದು, ನಿತೀಶ್ ಯಾದವ್ 7 ಗೋಲುಗಳನ್ನು (ಎಲ್ಲವೂ ಪೆನಾಲ್ಟಿ ಕಾರ್ನರ್ ಮೂಲಕ) ಗಳಿಸಿದ್ದಾರೆ. ಇನ್ನು ಧೀರಜ್ ಪಾಲ್ 5 ಗೋಲುಗಳೊಂದಿಗೆ ಗಮನ ಸೆಳೆದಿದ್ದಾರೆ.

ಮಹಿಳಾ ವಿಭಾಗ: ಪ್ರಶಸ್ತಿಗಾಗಿ ತೀವ್ರ ಪೈಪೋಟಿ

ಮಹಿಳೆಯರ ಫೈನಲ್ನಲ್ಲಿ ಹಾಕಿ ಮಧ್ಯಪ್ರದೇಶ ಮಹಿಳಾ ತಂಡ ಮತ್ತು ಹಾಲಿ ಚಾಂಪಿಯನ್ ಹಾಕಿ ಜಾರ್ಖಂಡ್ ಮಹಿಳಾ ತಂಡ ನಡುವೆ ಕದನ ನಡೆಯಲಿದೆ.

ಸೆಮಿಫೈನಲ್ನಲ್ಲಿ ಜಾರ್ಖಂಡ್ ತಂಡವು ಉತ್ತರ ಪ್ರದೇಶವನ್ನು 2-0 ಅಂತರದಿಂದ ಸೋಲಿಸಿದರೆ, ಮಧ್ಯಪ್ರದೇಶ ತಂಡವು ಹಾಕಿ ಒಡಿಶಾ ಮಹಿಳಾ ತಂಡ ವಿರುದ್ಧ 2-1 ಅಂತರದ ಜಯ ಸಾಧಿಸಿದೆ.

ಮಧ್ಯಪ್ರದೇಶದ ನುಶಿನ್ ನಾಜ್ 9 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜಾರ್ಖಂಡ್ ತಂಡದ ಸಂದೀಪಾ ಕುಮಾರಿ 5 ಗೋಲುಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಕಂಚಿನ ಪದಕಕ್ಕಾಗಿ ಪೈಪೋಟಿ

ಮಹಿಳೆಯರ ವಿಭಾಗ: ಒಡಿಶಾ vs ಉತ್ತರ ಪ್ರದೇಶ

ಪುರುಷರ ವಿಭಾಗ: ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದಿಯು vs ಪಂಜಾಬ್

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande